
ಪ್ರತಿವರ್ಷ ಬೇಸಿಗೆ ಆರಂಭದಲ್ಲಿಯೇ ನೀರಿನ ಸಮಸ್ಯೆ ಹೆಚ್ಚಾಗುತ್ತದೆ. ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲಗೋಪಾಳ ಜಾಧವ, ಮಾಳೆಗಾಂವ ತಾಂಡಾ ನಿವಾಸಿ
ಮಹಾದೇವ ನಗರ, ಸೋಮಾ ನಾಯಕ, ಧನ ಸಿಂಗ ಹಾಗೂ ರೂಪಲಾನಾಯಕ ತಾಂಡಾಗಳಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ಸರ್ಕಾರಿ ಶಾಲೆಯ ಕೊಳವೆ ಬಾವಿಯೇ ನಮಗೆ ಆಧಾರ. ಆದರೂ ಅದರಿಂದ ಕೇವಲ 20-30 ಕೊಡ ನೀರು ಮಾತ್ರ ಬರುತ್ತಿದೆಬಾಬುರಾವ ರಾಠೋಡ, ಸೋಮಾನಾಯಕ ತಾಂಡಾ ನಿವಾಸಿ
ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ನೀಡಬೇಕುಅಂಕುಶ ವಾಡೇಕರ್, ಸಾಮಾಜಿಕ ಕಾರ್ಯಕರ್ತ
ಕೂಲಿ ನಾಲಿ ಮಾಡಿ ಜೀವನ ಸಾಗಿಸೋ ಕೈಗಳು ಕೊಡ ಹಿಡಿದು ನೀರನ್ನು ಹುಡುಕಿ ಹೊತ್ತೊಯ್ಯುವುದರಲ್ಲಿ ಕಾಲ ಕಳೆಯಬೇಕಾಗಿದೆಅರುಣ ಜಾಧವ, ರೂಪಲಾನಾಯಕ ತಾಂಡಾ ನಿವಾಸಿ
ಮನೆ ಕೆಲಸ ಬಿಟ್ಟು ಬಿಸಿಲಿನಲ್ಲಿ ನೀರಿಗಾಗಿ ಅಲೆದಾಟವೇ ನಮ್ಮ ದಿನಚರಿ. ಕೂಡಲೇ ಟ್ಯಾಂಕರ್ ಅಥವಾ ಹೊಸ ಕೊಳವೆಬಾವಿ ಕಲ್ಪಿಸಬೇಕುಜಯಶ್ರೀ ಸುಧಾಮ ಜಾಧವ, ಧನಸಿಂಗನಾಯಕ ತಾಂಡಾ ನಿವಾಸಿ
ನೀರಿನ ಕೊರತೆ ಇರುವ ಗ್ರಾಮಗಳಲ್ಲಿ ಪರ್ಯಾಯವಾಗಿ ಕೊಳವೆಬಾವಿ ಹಾಗೂ ತೆರೆದ ಬಾವಿ ಬಾಡಿಗೆಯಿಂದ ಪಡೆದು ನೀರು ಪೂರೈಕೆ ಮಾಡಲಾಗುತ್ತಿದೆಮಾರುತಿ ರಾಠೋಡ,ಎಇಇ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಔರಾದ್ (ಬಾ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.