ಕಮಲನಗರ: ಕೃಷಿ ಇಲಾಖೆ ಅಧಿಕಾರಿ, ಕೃಷಿ ಸಹಾಯಕ ನಿರ್ದೇಶಕ ಮತ್ತು ಸಿಬ್ಬಂದಿಯನ್ನು ಕಾಯಂ ಆಗಿ ನೇಮಕ ಮಾಡಬೇಕು. ಪ್ರತ್ಯೇಕ ಕೃಷಿ ಕಚೇರಿ ಸ್ಥಾಪಿಸಬೇಕು ಎಂದು ರೈತ ಸಂಘ ಆಗ್ರಹಿಸಿದೆ.

ಈ ಕುರಿತು ಔರಾದ್(ಬಿ) ಸಹಾಯಕ ನಿರ್ದೇಶಕ ಅನ್ಸಾರಿ ಅವರಿಗೆ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಪ್ರವೀಣ ಕುಲಕರ್ಣಿ ನೇತೃತ್ವದಲ್ಲಿ ಪದಾಧಿಕಾರಿ ಗಳು ಮನವಿ ಪತ್ರ ಸಲ್ಲಿಸಿದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಪ್ರವೀಣ ಕುಲಕರ್ಣಿ ಮಾತನಾಡಿ, ‘ಕಮಲನಗರ ತಾಲ್ಲೂಕು ಕೇಂದ್ರ ಘೋಷಣೆಯಾಗಿ ಸುಮಾರು 9 ವರ್ಷ ಕಳೆದಿದೆ. ಇಲ್ಲಿಯ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಇಲಾಖೆಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ರೈತರಿಗೆ ಸೂಕ್ತ ಮಾಹಿತಿ ದೊರಕುತ್ತಿಲ್ಲ. ತಕ್ಷಣವೇ ಸರ್ಕಾರ ತಾಲ್ಲೂಕು ಕೇಂದ್ರದಲ್ಲಿ ಕಾಯಂ ಸಹಾಯಕ ಕೃಷಿ ನಿರ್ದೇಶಕರ ನೇಮಕಾತಿ ಮಾಡಬೇಕು. ಪ್ರತ್ಯೇಕ ಕಚೇರಿ ಸೇರಿದಂತೆ ಕಾಯಂ ಸಿಬ್ಬಂದಿ ಮತ್ತು ಕೃಷಿ ಅಧಿಕಾರಿಗಳ ನೇಮಕ ಮಾಡಬೇಕು’ ಎಂದು ಒತ್ತಾಯಿಸಿದರು.

‘ಮೇ 15ರೊಳಗೆ ಕಾಯಂ ಆಗಿ ಸಹಾಯಕ ಕೃಷಿ ನಿರ್ದೇಶಕರು, ಸೂಕ್ತ ಕಚೇರಿಯ ಜತೆಗೆ ಸಿಬ್ಬಂದಿ ನೇಮಕ ಮಾಡದಿದ್ದರೆ ರೈತ ಸಂಪರ್ಕ ಕೇಂದ್ರದ ಎದುರಗಡೆ ಧರಣಿ ಸತ್ಯಾಗ್ರಹ ನಡೆಸಲಾಗುತ್ತದೆ’ ಎಂದು ಎಚ್ಚರಿಸಿದರು.

ಉಪಾಧ್ಯಕ್ಷ ವೈಜಿನಾಥ ವಡ್ಡೆ, ಕಾರ್ಯದರ್ಶಿ ವಿಠ್ಠಲರಾವ ಪಾಟೀಲ, ನಗರಾಧ್ಯಕ್ಷ ರಾಮೇಶ್ವರ ಶಿವಣಕರ, ಉಪಾಧ್ಯಕ್ಷ ಮನೋಜಕುಮಾರ ಪೋಲಿಸ್ ಪಾಟೀಲ, ಪ್ರಶಾಂತ ಖಾನಾಪುರೆ, ಧನರಾಜ ಭವರಾ, ಗುಂಡಪ್ಪ ದಾನಾ, ರಾಜಕುಮಾರ ಪೊಲೀಸ್ ಪಾಟೀಲ ಇನ್ನಿತರರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-33-1006789788

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.