ಕಮಲನಗರ: ತಾಲ್ಲೂಕಿನ ಹಂದಿಕೇರ ಗ್ರಾಮದ ಬಸ್ ನಿಲ್ದಾಣದ ಸಮೀಪದ ಜೋಳದ ಕಣಕಿಯನ್ನು ಟ್ರಾಕ್ಟರ್ ಟ್ರಾಲಿಯಲ್ಲಿ ಸಾಗಿಸುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶದಿಂದ ಜೋಳದ ಕಣಕಿ ಸಂಪೂರ್ಣ ಭಸ್ಮಗೊಂಡಿರುವ ಘಟನೆ ಶನಿವಾರ ನಡೆದಿದೆ.

ಚಿಮ್ಮೇಗಾಂವ ತಾಂಡಾದ ಮನೋಹರ ಜಾಧವ ಎಂಬುವವರು ಜೋಳದ ಕಣಕಿ ಖರೀದಿಸಿದ್ದಾರೆ. ಶನಿವಾರ ಟ್ರ್ಯಾಕ್ಟರ್ನಲ್ಲಿ ಕಣಿಕೆ ತುಂಬಿಸಿಕೊಂಡು ತಾಂಡಾದ ಕಡೆ ಹೊರಟಿದ್ದಾರೆ. ಹಂದಿಕೇರ ಬಸ್ ನಿಲ್ದಾಣ ಬಳಿ ಇರುವ ವಿದ್ಯುತ್ ಕಂಬದ ತಂತಿ ಜೋತು ಬಿದ್ದಿದ್ದು, ತಂತಿಗಳೆರಡೂ ಸ್ಪರ್ಶಿಸಿದ್ದರಿಂದ ಬೆಂಕಿ ಕಿಡಿ ಹೊತ್ತಿ ಟ್ರಾಲಿಯಲ್ಲಿ ತುಂಬಿರುವ ಜೋಳದ ಕಣಕಿಗೆ ಆವರಿಸಿದೆ. ಗ್ರಾಮಸ್ಥರು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಟ್ರ್ಯಾಕ್ಟರ್ ಯಂತ್ರ ಮತ್ತು ಟ್ರಾಲಿಗೆ ಬೆಂಕಿಯಿಂದ ಕೆಲ ವಸ್ತುಗಳು ಸುಟ್ಟುಹೋಗಿವೆ. ಸ್ಥಳಕ್ಕೆ ಅಗ್ನಿಶಾಮಕದಳದ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಈ ಕುರಿತು ಹೊಕ್ರಾಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-33-1877621662

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.