ಕಮಲನಗರ: ‘ಮಹಾದೇವನ ಮಹಿಮೆ ಅಪಾರವಾಗಿದ್ದು, ಭಕ್ತರ ಕಷ್ಟಗಳನ್ನು ಪರಿಹರಿಸುವ ಕರುಣಾಮಯ ದೇವರು. ಸತ್ಯ, ಧರ್ಮ ಮತ್ತು ಶಾಂತಿಯ ಮಾರ್ಗದಲ್ಲಿ ನಡೆಯುವವರಿಗೆ ಮಹಾದೇವನು ಸದಾ ಆಶೀರ್ವಾದ ನೀಡುತ್ತಾನೆ. ಮಹಾದೇವನ ಆರಾಧನೆಯಿಂದ ಮನಸ್ಸಿಗೆ ಶಾಂತಿ ಹಾಗೂ ಜೀವನದಲ್ಲಿ ಧೈರ್ಯ ಸಿಗುತ್ತದೆ’ ಎಂದು ಶಾಸಕ ಪ್ರಭು.ಬಿ.ಚವ್ಹಾಣ ಹೇಳಿದರು.

ತಾಲ್ಲೂಕಿನ ಮುಧೋಳ(ಬಿ) ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದ ಮಹಾದೇವ ಮಂದಿರದ ಜಾತ್ರಾ ಮಹೋತ್ಸವದಲ್ಲಿ ಅವರು ಮಾತನಾಡಿದರು.

‘ಮಹಾದೇವ ಜಾತ್ರೆ ನಮ್ಮ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿದ್ದು, ಗ್ರಾಮೀಣ ಪ್ರದೇಶದ ಜನರಲ್ಲಿ ಭಕ್ತಿ, ಏಕತೆ ಮತ್ತು ಸಂಸ್ಕೃತಿ ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಇಂತಹ ಜಾತ್ರೆಗಳು ಸಮಾಜದ ಎಲ್ಲ ವರ್ಗದ ಜನರನ್ನು ಒಗ್ಗೂಡಿಸುವ ಪವಿತ್ರ ವೇದಿಕೆಗಳಾಗಿವೆ’ ಎಂದರು.

ಇದೇ ವೇಳೆ ತಾವು ಗ್ರಾಮದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಕುರಿತು ವಿವರಿಸಿದರು.

ಮುಧೋಳ(ಬಿ) ಮಠದ ವೈಜಿನಾಥ ಶಿವಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಹೆಡಗಾಪೂರ ಮಠದ ದಾರುಕಲಿಂಗ ಶಿವಾಚಾರ್ಯರು, ಮುಖಂಡರಾದ ಮೀನಾಕ್ಷಿ ಸಂಗ್ರಾಮ, ಅಮೃತರಾವ ವಟಗೆ, ಗಜಾನಂದ ವಟಗೆ, ಧನರಾಜ ಗುಡ್ಡಾ, ಉದಯ ಸೋಲಾಪೂರೆ, ಪಿಡಿಓ ದತ್ತಾತ್ರಿ ಪೂಜಾರಿ ಹಾಗೂ ಸ್ಥಳೀಯ ಮುಖಂಡರು, ಗ್ರಾಮಸ್ಥರು ಹಾಗೂ ಭಕ್ತರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-33-967175389

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.