ಕಮಲನಗರ: ‘ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಅಕ್ರಮ ಸಾಗಾಣಿಕೆ ಮತ್ತು ವಿತರಣೆ ವೇಳೆ ಯಾವುದೇ ರೀತಿಯ ತಾರತಮ್ಯ ಆಗದಂತೆ ನೋಡಿಕೊಳ್ಳಬೇಕು’ ಎಂದು ಶಾಸಕ ಪ್ರಭು ಬಿ.ಚವಾಣ್ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಶುಕ್ರವಾರ 2026-27ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಔರಾದ್(ಬಿ) ಕ್ಷೇತ್ರಕ್ಕೆ ಅಗತ್ಯವಿರುವಷ್ಟು ಬಿತ್ತನೆ ಬೀಜ, ರಸಗೊಬ್ಬರ ತರಿಸಲಾಗಿದೆ. ವಿಶೇಷವಾಗಿ ಇಲ್ಲಿ ಸೋಯಾಬಿನ್ ಅಗತ್ಯವಿರುಷ್ಟು ದಾಸ್ತಾನು ಮಾಡಿಕೊಳ್ಳಲಾಗಿದೆ. ಇನ್ನೂ ಬೇಕಿದ್ದರೂ ಅಧಿಕಾರಿಗಳೊಂದಿಗೆ ಮಾತನಾಡಿ ತರಿಸಲು ವ್ಯವಸ್ಥೆ ಮಾಡುತ್ತೇನೆ. ರೈತರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗದೇ ನಿಗದಿತ ದಿನಾಂಕದಂದು ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಬೀಜ, ರಸಗೊಬ್ಬರ ಪಡೆಯಬಹುದು’ ಎಂದು ಹೇಳಿದರು.

‘ಬಿತ್ತನೆ ಬೀಜ ವಿತರಣೆ ಸಂದರ್ಭದಲ್ಲಿ ಯಾವುದೇ ರೀತಿಯ ಗೊಂದಲಗಳು ಉಂಟಾಗಬಾರದು. ಬೀಜ ವಿತರಿಸುವ ದಿನಾಂಕದ ಬಗ್ಗೆ ಮುಂಚಿತವಾಗಿ ಗ್ರಾಮಗಳಲ್ಲಿ ಡಂಗೂರ ಸಾರಿಸಿ ತಿಳಿಸಬೇಕು. ಅಧಿಕಾರಿಗಳು ಮತ್ತು ಸಿಬ್ಬಂದಿ ರೈತರೊಂದಿಗೆ ಸೌಜನ್ಯದಿಂದ ವ್ಯವಹರಿಸಬೇಕು. ರೈತರೊಂದಿಗೆ ಜೋರಾಗಿ ಮಾತನಾಡುವುದು, ಕೆಟ್ಟ ಪದಗಳನ್ನು ಬಳಸುವುದು ಅಥವಾ ಹೆಚ್ಚುವರಿ ಹಣ ಪಡೆಯುವುದು ಕಂಡು ಬಂದರೆ ಯಾವುದೇ ಮುಲಾಜಿಲ್ಲದೇ ಶಿಸ್ತು ಕ್ರಮ ಕೈಗೊಳ್ಳುತ್ತೇನೆ’ ಎಂದು ಎಚ್ಚರಿಸಿದರು.

‘ನಮ್ಮೆಲ್ಲರಿಗೂ ಅನ್ನ ನೀಡಿ ಪೋಷಿಸುವ ರೈತರ ಬೆಳೆ ಸಮೃದ್ಧವಾಗಿ ಬೆಳೆಯಬೇಕು. ಈ ದಿಶೆಯಲ್ಲಿ ಅವರಿಗೆ ಗುಣಮಟ್ಟದ ಬಿತ್ತನೆ ಬೀಜ ಪೂರೈಸಬೇಕು. ಅವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಈ ವಿಷಯದಲ್ಲಿ ಅಧಿಕಾರಿಗಳು ಹೆಚ್ಚಿನ ಜಾಗೃತಿ ವಹಿಸಬೇಕು. ಎಲ್ಲಿಯಾದರೂ ಕಳಪೆ ಮಟ್ಟದ ಬಿತ್ತನೆ ಬೀಜ ಪೂರೈಸಿರುವುದು ಕಂಡುಬಂದರೆ ತಕ್ಷಣ ಹಿಂದಿರುಗಿಸಿ ಸರಿಯಾದ ಬೀಜ ತರಿಸಬೇಕು. ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಬಾರದು’ ಎಂದು ಹೇಳಿದರು.

‘ರೈತರು ಕೂಡ ನಿಗದಿತ ದಿನಾಂಕದಂದು ಮಾತ್ರ ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪಡೆಯಬೇಕು. ನಿಗದಿತ ಮಿತಿಗಿಂತ ಹೆಚ್ಚು ರಸಗೊಬ್ಬರ ಕೇಳುವುದು, ಅವರ ಅನುಮತಿಯಿಲ್ಲದೇ ಅನ್ಯರ ಪಹಣಿಯಿಂದ ಹೆಚ್ಚುವರಿ ಬೀಜ ಪಡೆಯುವುದು ಮಾಡದೇ ಅಧಿಕಾರಿಗಳಿಗೆ ತಾವೂ ಕೂಡ ಅಗತ್ಯ ಸಹಕಾರ ನೀಡಬೇಕು. ಎಲ್ಲಿಯಾದರೂ ಲೋಪಗಳು ನಡೆಯುವುದು ಗಮನಕ್ಕೆ ಬಂದರೆ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳನ್ನು ಅಥವಾ ತಮ್ಮನ್ನು ಸಂಪರ್ಕಿಸಿದರೆ ಸರಿಪಡಿಸಲಾಗುವುದು’ ಎಂದು ಹೇಳಿದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಧೂಳಪ್ಪ ಮಾತನಾಡಿ, ‘ಸೋಯಾಬಿನ್ 36,000 ಕ್ವಿಂಟಲ್ ಬೇಡಿಕೆ ಪೈಕಿ 33,000 ಕ್ವಿಂಟಲ್ ಬಂದಿದೆ. ಉಳಿದ 3,000 ಕ್ವಿಂಟಲ್ ಟ್ರಾನ್ಸ್ಪೋರ್ಟೇಶನ್ನಲ್ಲಿದೆ. ಉಳಿದ ಎಲ್ಲ ಬಿತ್ತನೆ ಬೀಜಗಳನ್ನು ಅಗತ್ಯಕ್ಕೆ ಅನುಗುಣವಾಗಿ ದಾಸ್ತಾನು ಮಾಡಿಕೊಳ್ಳಲಾಗಿದೆ. ರೈತರು ಆತಂಕಪಡಬೇಕಿಲ್ಲ. ತಮಗೆ ತಿಳಿಸಿದ ದಿನಾಂಕದಂದು ಬಿತ್ತನೆ ಬೀಜ ಪಡೆಯಬೇಕು. ಹಾಗೆಯೇ ರೈತರು 80 ಎಂ.ಎಂ. ಮಳೆಯಾದ ನಂತರವೇ ಸೊಯಾಬಿನ್ ಬಿತ್ತನೆ ಮಾಡಬೇಕು. ಸೊಯಾಬೀನ್ 4-5 ಸೆಂ.ಮೀ. ಆಳದಲ್ಲಿ ಬಿತ್ತನೆ ಮಾಡಬೇಕು. ಹಾಗಾಗಿ ರೈತರು ಅಗತ್ಯ ಮುನ್ನೆಚ್ಚರಿಕೆಯೊಂದಿಗೆ ಬಿತ್ತನೆ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ದೇವಿಕಾ, ಮುಖಂಡರಾದ ಧೊಂಡಿಬಾ ನರೋಟೆ, ಶಿವಕುಮಾರ ಝಲ್ಪೆ, ಶಿವಾನಂದ ವಡ್ಡೆ, ಸಚಿನ ರಾಠೋಡ, ಸುಭಾಷ ಮಿರ್ಚೆ, ಉಮಾಕಾಂತ, ಗಂಗಪ್ಪಾ ನವಾಡೆ, ನಾಗೇಶ ಪತ್ರೆ, ರಂಗರಾವ ಜಾಧವ, ಕೃಷಿ ಇಲಾಖೆ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಹಾಗೂ ರೈತರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-33-1971119729

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.