ಕಮಲನಗರ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕ ಪದಾಧಿಕಾರಿಗಳ ನೇತೃತ್ವದಲ್ಲಿ ಕಬ್ಬು ಬಿಲ್ಲು ಪಾವತಿಸಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್ ಅಮಿತಕುಮಾರ ಕುಲಕರ್ಣಿ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ರೈತ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ಪ್ರವೀಣ ಕುಲಕರ್ಣಿ ಮಾತನಾಡಿ, ‘ರೈತ ಬಾಂಧವರೂ ತಮ್ಮ ಕಬ್ಬು ಸಾಗಣೆ ಮಾಡಿ ಎರಡು ತಿಂಗಳಾದರೂ ಕಬ್ಬು ಸಾಗಣೆ ಬಿಲ್ಲು ಪಾವತಿಯಾಗಿಲ್ಲದಿರುವುದು ದುಖಃಕರ ಸಂಗತಿಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮುಂದಿನ 10 ದಿನಗಳ ಒಳಗಾಗಿ ರೈತರ ಕಬ್ಬಿನ ಬಿಲ್ ಪಾವತಿ ಮಾಡದೇ ಇದ್ದಲ್ಲಿ ರಸ್ತೆಗಿಳಿದು ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಸಂಘಟನೆ ಪ್ರಮುಖರು ಎಚ್ಚರಿಸಿದರು.

ರೈತ ಸಂಘದ ಗೌರವಧ್ಯಕ್ಷ ವೈಜನಾಥ ವಡ್ಡೆ, ಕಾರ್ಯದರ್ಶಿ ವಿಠ್ಠಲರಾವ ಪಾಟೀಲ, ರಾಮೇಶ್ವರ ಶಿವಣಕರ, ಮನೋಜ ಪೊಲೀಸ್ ಪಾಟೀಲ, ಧನರಾಜ ಭವರಾ, ವಿಜಯಕುಮಾರ ಪ್ರಭುರಾವ, ರಾಜಕುಮಾರ ವಡಗಾಂವೆ, ನೀಲಾಂಬಿಕಾದೇವಿ ಗಳಗೆ, ಉಮಾಕಾಂತ ಬಚ್ಚಣ್ಣಾ ಸೇರಿದಂತೆ ಇನ್ನಿತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-33-1833668909

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.