ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಬಾವುಟ ಮೆರವಣಿಗೆ 30ಕ್ಕೆ

Last Updated 25 ನವೆಂಬರ್ 2022, 12:28 IST
ಅಕ್ಷರ ಗಾತ್ರ

ಬೀದರ್: ಜೈ ಭಾರತ ಮಾತಾ ಸೇವಾ ಸಮಿತಿ ವತಿಯಿಂದ ಭಾಲ್ಕಿ ಪಟ್ಟಣದಲ್ಲಿ ನ.30 ರಂದು ಹಮ್ಮಿಕೊಂಡ ಗಡಿ ಕನ್ನಡೋತ್ಸವದ ಭಿತ್ತಿ ಪತ್ರಗಳನ್ನು ಭಾಲ್ಕಿ ತಾಲ್ಲೂಕಿನ ಖಾನಾಪುರದ ತಾಲ್ಲೂಕು ಘಟಕದ ಕಚೇರಿಯಲ್ಲಿ ಶುಕ್ರವಾರ ಬಿಡುಗಡೆ ಮಾಡಲಾಯಿತು.

ಸಮಿತಿಯ ಭಾಲ್ಕಿ ತಾಲ್ಲೂಕು ಘಟಕದ ಅಧ್ಯಕ್ಷ ಪಪ್ಪು ಪಾಟೀಲ ಖಾಜಾಪುರ ಬಿಡುಗಡೆ ಮಾಡಿದರು.

ಗಡಿಯಲ್ಲಿ ಕನ್ನಡ ಗಟ್ಟಿಯಾಗಿ ಕಟ್ಟಲು ಹಾಗೂ ಪ್ರತಿಯೊಬ್ಬರಲ್ಲೂ ಕನ್ನಡಾಭಿಮಾನ ಮೂಡಿಸಲು ಜೈ ಭಾರತ ಮಾತಾ ಸೇವಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜರ ನೇತೃತ್ವದಲ್ಲಿ ಗಡಿ ಕನ್ನಡೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ನ. 30 ರಂದು ಮಧ್ಯಾಹ್ನ 2ಕ್ಕೆ ಭಾಲ್ಕಿ ಪಟ್ಟಣದ ತಹಶೀಲ್ದಾರ್ ಕಚೇರಿ ಸಮೀಪದ ಪುರಭವನದಲ್ಲಿ ಗಡಿ ಕನ್ನಡೋತ್ಸವ ಜರುಗಲಿದೆ. ಬೆಳಿಗ್ಗೆ 10.30ಕ್ಕೆ ಶಿವಾಜಿ ವೃತ್ತದಿಂದ ಪ್ರಮುಖ ಬೀದಿಗಳ ಮೂಲಕ ಪುರಭವನದವರೆಗೆ ಸಾವಿರ ಮೀಟರ್ ಉದ್ದದ ಕನ್ನಡ ಬಾವುಟ ಹಾಗೂ ತಾಯಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ನಡೆಯಲಿದೆ ಎಂದು ಹೇಳಿದರು.

ಕನ್ನಡಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಪ್ರಮುಖರಾದ ದಿಲೀಪ್ ಪಾಟೀಲ, ಶಿವಕುಮಾರ ಮದನೂರೆ, ಸಂಗಮೇಶ, ಬಲಬೀರ್, ಆನಂದ ರಾಂಪುರೆ, ನಂದೇಶ ಪಾಟೀಲ, ಮಣಿ, ಸಾಗರ, ನಾಗೇಶ ಪಾಟೀಲ, ರಾಜಕುಮಾರ ಶೆಟಕಾರ್, ಬಸವರಾಜ ಪಾಟೀಲ, ಪ್ರಮೋದ್, ಅಮರ, ದತ್ತು, ದಿಗಂಬರ, ಸಹಾನಂದ, ವಿಕಾಸ, ದೀಪಕ್, ಅಭಿಷೇಕ, ಮಂಜು, ಯೋಗೇಶ, ನಿತೀಶ್ ಪಾಟೀಲ, ಮಹಾದೇವ ಪಾಟೀಲ ಹಾಗೂ ವಿನೋದ ರಾಠೋಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT