ಭಾನುವಾರ, ನವೆಂಬರ್ 17, 2019
28 °C

‘ಕನ್ನಡ ಶ್ರೀಮಂತ ಭಾಷೆ’

Published:
Updated:
Prajavani

ಔರಾದ್:  ‘ಕನ್ನಡ ಭಾಷೆ ಪ್ರಾಚೀನ ಹಾಗೂ ಶ್ರೀಮಂತ ಭಾಷೆಯಾಗಿದೆ’ ಎಂದು ಮುಖ್ಯ ಶಿಕ್ಷಕ ಶಿವಕುಮಾರ ಹಿರೇಮಠ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಸಂತಪುರ ಅನುಭವ ಮಂಟಪ ಗುರುಕುಲ ಹಾಗೂ ಸಿದ್ಧರಾಮೇಶ್ವರ ಕಾಲೇಜು ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

‘ಕನ್ನಡ ಹೆಮ್ಮೆಯ ಭಾಷೆ. ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಇಂಗ್ಲಿಷ್ ಮಾಧ್ಯಮ ವಿದ್ಯಾರ್ಥಿಗಳನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯ ಹೊಂದಿದ್ದಾರೆ’ ಎಂದು ತಿಳಿಸಿದರು.

ಶಿಕ್ಷಕ ಮಾರುತಿ ಗಾದಗೆ ಕನ್ನಡ ಕವಿಗಳ ಕುರಿತು ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಟ್ಟರು.

ಪ್ರಾಂಶುಪಾಲ ನವೀಲಕುಮಾರ ಉತ್ಕಾರ್‌,‘ಕನ್ನಡದಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ಐಎಎಸ್, ಕೆಎಎಸ್ ಪಾಸಾಗಿದ್ದಾರೆ’ ಎಂದರು.

ಉಪನ್ಯಾಸಕ ಭೂಷಣ ಪಾಟೀಲ ಮಾತನಾಡಿದರು. ಶಿವಪುತ್ರ ಧರಣೆ ಸ್ವಾಗತಿಸಿದರು. ಕಲ್ಲಪ್ಪ ಬುಟ್ಟೆ ನಿರೂಪಿಸಿದರು. ಸರಸ್ವತಿ ಜುಲಾಂಡೆ ವಂದಿಸಿದರು. ಶಿಕ್ಷಕ ಸಂಗಮೇಶ ಬ್ಯಾಳೆ, ನೀಲಾಂಬಿಕಾ ಕಾಂಬಳೆ, ನಾಗರತ್ನಗೌಡ, ನಾಗರಾಜ ಬಂಬುಳಗೆ, ಉಮಾಕಾಂತ ಮುಗುಟೆ ಹಾಗೂ ವಿಜಯಕುಮಾರ ಪಾಟೀಲ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)