ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲನಗರ: ಸಂಭ್ರಮದ ರಾಜ್ಯೋತ್ಸವ

Last Updated 1 ನವೆಂಬರ್ 2019, 16:02 IST
ಅಕ್ಷರ ಗಾತ್ರ

ಕಮಲನಗರ: ನಾಡು , ನುಡಿ ರಕ್ಷಣೆ ಪ್ರತಿಯೊಬ್ಬರ ಹೊಣೆ. ಎಲ್ಲರೂ ಸೇರಿ ನಾಡಿನ ಹಿತಕ್ಕಾಗಿ ದುಡಿಯಬೇಕು ಎಂದು ಗ್ರಾಪಂ ಸದಸ್ಯ ಸಂಜೀವಕುಮಾರ ಮಹಾಜನ ಹೇಳಿದರು.

ಪಟ್ಟಣದಲ್ಲಿ ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡಕ್ಕೆ ಕೈ ಎತ್ತಿದರೆ ಕಲ್ಪವೃಕ್ಷವಾಗುತ್ತದೆ ಎನ್ನುವ ಹಿರಿಯರ ಮಾತಿನಂತೆ ನಾಡಿನ, ನೆಲ, ಜಲ ಹಾಗೂ ಭಾಷೆಯ ಹಿತಕ್ಕಾಗಿ ಒಗ್ಗಟ್ಟಾಗಬೇಕು. ಸಮೃದ್ಧ ನಾಡು ಕಟ್ಟಲು ಎಲ್ಲರೂ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದರು.

ಕಮಲನಗರ ಪಿಡಿಒ ಪ್ರಭುದಾಸ ಜಾಧವ ಮಾತನಾಡಿ,‘ಕನ್ನಡ ನಾಡು, ನುಡಿ ಜಲದ ಉಳಿವಿಗಾಗಿ ಎಲ್ಲರೂ ಒಂದಾಗಿ ಶ್ರಮೀಸೋಣ. ಭಾಷಾ ಆಧಾರಿತ ಪ್ರಾಂತ್ಯಗಳನ್ನು ರಾಜ್ಯಗಳನ್ನಾಗಿ ವಿಂಗಡಿಸಿ, ಕನ್ನಡಕ್ಕೆ ಮಾನ್ಯತೆ ನೀಡಿ ರಾಜ್ಯ ಸ್ಥಾಪನೆ ಮಾಡಿದ ಸುದಿನ ಇಂದು ಎಂದರು.

ತಾಪಂ ಕಚೇರಿಯಲ್ಲಿ ವ್ಯವಸ್ಥಾಪಕ ಸಂಜೀವಕುಮಾರ ಗೊರನಳ್ಳೆ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಧ್ವಜಾರೋಹಣ ನೆರವೇರಿಸಿದರು. ಸಾವಳಿ ಮುಖಂಡ ಅಶೋಕ ಗಣಪತರಾವ ಮೇತ್ರೆ ಕನ್ನಡಾಂಬೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಗ್ರಾಪಂ ಕಚೇರಿಯಲ್ಲಿ ಪಿಡಿಒ ಪ್ರಭುದಾಸ ಜಾಧವ ಧ್ವಜಾರೋಹಣ ನೆರವೇರಿಸಿದರು.

ತಾಪಂ ಸಿಬ್ಬಂದಿ ವಿನಾಯಕ ಹಾಲಹಳ್ಳಿ, ಗ್ರಾಪಂ ಸದಸ್ಯ ಶಾಂತಕುಮಾರ ಬಿರಾದಾರ, ಸಂತೋಷ ನವಾಡೆ, ದಯಾನಂದ ವಡ್ಡೆ, ಪೀಟರ್‍ಸನ್, ಶರಣಪ್ಪ ಮಾನಕರೆ, ಮಲ್ಲು ಬರ್ಗಲೆ, ಸಂಭಾಜೀ, ರಾಮಚಂದ್ರರಾವ ಜಯಸಿಂಗ ಹಾಗೂ ರಾಜಕುಮಾರ ಸುತಾರ ಮತ್ತಿತರರು ಇದ್ದರು.

ಸೋನಾಳ ಶ್ರೀಗುರು ನಿರಂಜನ ಶಾಲೆ : ಸೋನಾಳ ಗ್ರಾಮದ ಶ್ರೀಗುರು ನಿರಂಜನ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ 64ನೇ ಕನ್ನಡ ರಾಜ್ಯೋತ್ಸವ ದಿನ ಆಚರಿಸಲಾಯಿತು.

ಮುಖಂಡ ಕಲ್ಯಾಣರಾವ ಬಿರಾದಾರ ಅವರು ಕನ್ನಡಾಂಬೆ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು. ಶಾಲೆ ಮುಖ್ಯ ಶಿಕ್ಷಕ ಗುಂಡಪ್ಪ ಬಾರ್ಕಿ ಧ್ವಜಾರೋಹಣ ನೆರವೇರಿಸಿದರು.

ಶಿಕ್ಷಕ ಮತ್ತಪ್ಪ ಸನಕಿಪುರ ಮಾತನಾಡಿ,‘ಕನ್ನಡಾಭಿಮಾನವನ್ನು ಚಿಕ್ಕಂದಿನಿಂದಲೇ ಬೆಳೆಸಿಕೊಂಡು ಜೀವನದುದ್ದಕ್ಕೂ ಕನ್ನಡಿಗರಾಗಿ ಬಾಳಿರಿ ಎಂದರು.

ಮಮತಾ ಬಾರ್ಕಿ, ಜ್ಯೋತಿ ಸೈನಾ ಹಾಗೂ ಶಿಕ್ಷಕ ಸಿಬ್ಬಂದಿ ಮತ್ತು ಮಕ್ಕಳು ಇದ್ದರು.

ಸಂಗಮ ಗುರುಕುಲ ಶಾಲೆ : ಸಂಗಮ ಗ್ರಾಮದ ಡಾ. ಚನ್ನಬಸವ ಪಟ್ಟದ್ದೇವರು ಗುರುಕುಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ 64ನೇ ಕನ್ನಡ ರಾಜ್ಯೋತ್ಸವ ದಿನ ಆಚರಿಸಲಾಯಿತು.

ಶಾಲೆ ಸಲಹಾ ಸಮಿತಿ ಉಪಾಧ್ಯಕ್ಷ ಅನೀಲಕುಮಾರ ಹೊಳಸಂಬ್ರೆ ಧ್ವಜಾರೋಹಣ ನೆರವೇರಿಸಿದರು.
ಅಧ್ಯಕ್ಷತೆ ವಹಿಸಿದ ಮಹಾದೇವಮ್ಮ ತಾಯಿ ಕನ್ನಡಾಂಬೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕನ್ನಡ ಬರಹದ ಮಾದರಿಗಳಿಗೆ ನೂರಾರು ವರ್ಷಗಳ ಇತಿಹಾಸವಿದೆ. ನಮ್ಮ ಮಾತೃ ಭಾಷೆ ನಿತ್ಯ ಬಳಸಬೇಕು. ಕನ್ನಡ ಮಾತನಾಡುವ ಪ್ರಾಂತ್ಯಗಳನ್ನು ಏಕೀಕರಣ ಚಳುವಳಿ ಮೂಲಕ ಒಗ್ಗೂಡಿಸಲಾಯಿತು ಎಂದರು.

ವಿದ್ಯಾರ್ಥಿನಿಯರು ಭವನೇಶ್ವರಿ ದೇವಿಯ ವೇಷಭೂಷಣ ತೊಟ್ಟು ಕಾರ್ಯಕ್ರಮಕ್ಕೆ ಮೆರಗು ತಂದರು. ಶಿಕ್ಷಕಿಯಾದ ಸಂಗೀತಾ ಮೇತ್ರೆ, ಪುಷ್ಪಾವತಿ ಬಿರಾದಾರ, ಶಿಕ್ಷಕ ಸುರೇಶ ನೀಲಮಠ, ಮಹಾದೇವ ಕರಂಜೆ ಇದ್ದರು.

ಶಿವಕುಮಾರ ಸ್ವಾಮಿ ನಿರೂಪಿಸಿದರು. ಸಂಜೀವಕುಮಾರ ಮೇಂಗಾ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಹಾದೇವ ವಂದಿಸಿದರು.

ಪಿಕೆಪಿಎಸ್ ಖೇರ್ಡಾ: ಕಮಲನಗರ ತಾಲ್ಲೂಕಿನ ದಾಬಕಾ ವಲಯದಲ್ಲಿ ಬರುವ ಖೇರ್ಡಾ(ಬಿ) ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ(ನಿ) ಕಚೇರಿಯಲ್ಲಿ ಶುಕ್ರವಾರ 64ನೇ ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು.

ಪಿಕೆಪಿಎಸ್ ಅಧ್ಯಕ್ಷ ಗೋವಿಂದ ದೋಂಡಿಬಾ ರೆಡ್ಡಿ ಅವರು ಕನ್ನಡಾಂಬೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷ ಶಂಕರರಾವ ನಾರಾಯಣರಾವ ಪಾಟೀಲ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನವನಾಥ ವಿಶ್ವನಾಥ ಶ್ರೀಗಿರೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬಾಳಾ ಸಾಹೇಬ್ ಮುಳೆ, ಸಂಜಯ ಸ್ವಾಮಿ, ಹಣಮಂತ ಸುವರ್ಣಕರ್, ನರಸಿಂಗ ಗುಂಗೆ, ನರಸಿಂಗ ಜಮಾದಾರ, ಉಮಾಕಾಂತ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಸಿಬ್ಬಂದಿ ವರ್ಗ ಮತ್ತು ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT