ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಜಿಲ್ಲೆಯಾದ್ಯಂತ ಧಾರಾಕಾರ ಮಳೆ, ಮನೆಗಳಿಗೆ ನುಗ್ಗಿದ ನೀರು

Last Updated 23 ಜುಲೈ 2022, 4:36 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯ ವಿವಿಧೆಡೆ ಶನಿವಾರ ಬೆಳಗಿನ ಜಾವ ಧಾರಾಕಾರ ಮಳೆಯಾಗಿದೆ. ತಗ್ಗು ಪ್ರದೇಶದ ಮನೆಗಳಿಗೂ ನೀರು ನುಗ್ಗಿದೆ. ಔರಾದ್ ತಾಲ್ಲೂಕಿನ ಬೆಳಕುಣಿ ಸಮೀಪದ ಚಿಕ್ಕ ಸೇತುವೆ ಕುಸಿದಿದೆ.

ಔರಾದ್ ತಾಲ್ಲೂಕಿನ ಖಾಶೆಂಪುರ ಬಳಿ ಸೇತುವೆ ಮುಳುಗಿ ಕೆಲ ಗ್ರಾಮಗಳ ಸಂಪರ್ಕ ಕಡಿದು ಹೋಗಿದೆ. ಬೆಳಕುಣಿ ಬಳಿ ಸೇತುವೆ ಭಾಗಶಃ ಕುಸಿದು ಬಿದ್ದಿದೆ‌. ಹೊಲಗಳಲ್ಲಿ ನೀರು ನುಗ್ಗಿದೆ. ತಗ್ಗು ಪ್ರದೇಶದ ಮನೆಗಳಿಗೂ ನೀರು ನುಗ್ಗಿದೆ.

ತಾಲ್ಲೂಕಿನಲ್ಲಿ ಕಳೆದ 24 ಗಂಟೆಗಳಲ್ಲಿ ಔರಾದ್‌ನಲ್ಲಿ 80.4 ಮಿ.ಮೀ, ಚಿಂತಾಕಿಯಲ್ಲಿ 80.3 ಮಿ.ಮೀ, ಸಂತಪುರಲ್ಲಿ 120 ಮಿ.ಮೀ ಮಳೆ ಅಬ್ಬರಿಸಿದೆ.

ಬೀದರ್ ತಾಲ್ಲೂಕಿನ ಚಿಟ್ಟಾ 65 ಮಿ.ಮೀ, ಮಾಳೆಗಾಂವ, ಅಲಿಯಾಬಾದ್‌ನಲ್ಲಿ 64.5 ಮಿ.ಮೀ, ಭಾಲ್ಕಿ ತಾಲ್ಲೂಕಿನ ಕುರುಬಖೇಳಗಿಯಲ್ಲಿ 66.5 ಮಿ.ಮೀ, ಮೋರಂಬಿ, ಬಾಳೂರ, ಚಳಕಾಪುರದಲ್ಲಿ 65 ಮಿ.ಮೀ, ಘೋರಚಿಂಚೋಳಿಯಲ್ಲಿ 64.5 ಮಿ.ಮೀ, ಹುಲಸೂರಲ್ಲಿ 64.5 ಮಿ.ಮೀ ಹಾಗೂ ಕಮಲನಗರದಲ್ಲಿ 58.6 ಮಿ.ಮೀ ಮಳೆ ಸುರಿದಿದೆ. ಹವಾಮಾನ ವಿಜ್ಞಾನ ಇಲಾಖೆ ಭಾನುವಾರವೂ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ.

ಬೀದರ್ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಕಾರಣ ಇಂದು (ಜುಲೈ 23) ಅಂಗನವಾಡಿ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT