ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡದ ಕೆಲಸಗಳಿಗೆ ಬೆಂಬಲ’

ಶಾಸಕ ಖಂಡ್ರೆ ಬೆಂಬಲ ಕೋರಿದ ಕಸಾಪ ಸ್ಥಾನದ ಆಕಾಂಕ್ಷಿ ಸುರೇಶ ಚನಶೆಟ್ಟಿ
Last Updated 3 ಏಪ್ರಿಲ್ 2021, 3:38 IST
ಅಕ್ಷರ ಗಾತ್ರ

ಭಾಲ್ಕಿ: ಜಿಲ್ಲಾ ಕಸಾಪ ಸ್ಥಾನದ ಆಕಾಂಕ್ಷಿ ಸುರೇಶ ಚನಶೆಟ್ಟಿ ಪಟ್ಟಣದಲ್ಲಿ ಶುಕ್ರವಾರ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರನ್ನು ಭೇಟಿಯಾಗಿ ಸನ್ಮಾನಿಸಿ ಅವರ ಬೆಂಬಲ ಕೋರಿದರು.

ಸನ್ಮಾನ ಸ್ವೀಕರಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ,‘ನಾನು ಸಚಿವನಿದ್ದ ಸಂದರ್ಭದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಯಾವುದೇ ವಿವಾದ ಇಲ್ಲದ ನಿವೇಶನ ನೀಡುವಂತೆ ಡಿಸಿಗೆ ಸೂಚನೆ ನೀಡಿದ್ದೆ, ಅದರಂತೆ ಜಿಲ್ಲಾ ಕಸಾಪ ಅಧ್ಯಕ್ಷರಾಗಿದ್ದ ಸುರೇಶ ಚನಶೆಟ್ಟಿ ಅವರು ನಿರಂತರ ಪ್ರಯತ್ನ ಮಾಡಿ ಕನ್ನಡ ಭವನಕ್ಕೆ ಸ್ವಂತ ನಿವೇಶನ ಹಾಗೂ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ತರುವಲ್ಲಿ ಯಶಸ್ವಿ ಆಗಿದ್ದಾರೆ’ ಎಂದು ಅವರುಹೇಳಿದರು.

‘ಚನಶೆಟ್ಟಿ ತಮ್ಮ ಅಧಿಕಾರದ ಅವಧಿಯಲ್ಲಿ ಉತ್ತಮ ಕೆಲಸ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಚನಶೆಟ್ಟಿ ಅವರು ಕ್ರಿಯಾಶೀಲ ಯುವಕರಾಗಿದ್ದಾರೆ. ಕನ್ನಡದ ಬಗ್ಗೆ ಎಲ್ಲಿಲ್ಲದ ಪ್ರೀತಿ, ಅಭಿಮಾನ ಬೆಳೆಸಿಕೊಂಡಿದ್ದಾರೆ. ಕನ್ನಡದ ಕೆಲಸ ಮಾಡುವವರಿಗೆ ಸದಾ ನನ್ನ ಬೆಂಬಲ ಇರುತ್ತದೆ’ ಎಂದು ತಿಳಿಸಿದರು.

ಜಿಲ್ಲಾ ಕಸಾಪ ಸ್ಥಾನದ ಆಕಾಂಕ್ಷಿ ಸುರೇಶ ಚನಶೆಟ್ಟಿ ಮಾತನಾಡಿ,‘ಯಾವುದೇ ಪ್ರತಿಷ್ಠೆ, ಜಿದ್ದಿಗಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ. ಎಲ್ಲರ ಒತ್ತಾಯದ ಮೇರೆಗೆ ನನ್ನ ಅವಧಿಯಲ್ಲಿನ ಬಾಕಿ ಉಳಿದ ಕೆಲಸ ಪೂರ್ಣಗೊಳಿಸಲು ಸ್ಪರ್ಧೆ ಮಾಡುತ್ತಿದ್ದೇನೆ. ಶಾಸಕ ಈಶ್ವರ ಖಂಡ್ರೆ ಅವರು ಕನ್ನಡದ ಶಾಸಕರಾಗಿದ್ದು, ನನ್ನ ಅವಧಿಯಲ್ಲಿನ ಕನ್ನಡಪರ ಚಟುವಟಿಕೆಗಳಿಗೆ ಸದಾ ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ’ ಎಂದು ಅವರು ಸ್ಮರಿಸಿದರು.

ಹಿರಿಯ ಸಾಹಿತಿ ಡಾ.ವೈಜಿನಾಥ ಭಂಡೆ, ಕಸಾಪ ಗೌರವ ಕಾರ್ಯದರ್ಶಿ ಬಸವರಾಜ ಬಲ್ಲೂರ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಾಜಪ್ಪ ಪಾಟೀಲ, ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಲ್ಮಂಡಗೆ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸೂರ್ಯಕಾಂತ ಸುಂಟೆ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಶಶಿಧರ ಕೋಸಂಬೆ, ಎಂ.ಎಸ್.ಮನೋಹರ್, ಪ್ರಮುಖರಾದ ಶಿವಶಂಕರ ಟೋಕರೆ, ರಮೇಶ ಬಿರಾದಾರ, ಶರಣಬಸಪ್ಪ ಕಾರಾಮುಂಗೆ, ನಾಗಭೂಷಣ ಮಾಮಡಿ, ಅಶೋಕ ಬಾವುಗೆ, ಸಂತೋಷ ಬಿಜಿ ಪಾಟೀಲ, ಪ್ರಭು ಡಿಗ್ಗೆ, ರಮೇಶ ಚಿದ್ರಿ, ಸಂಗಮೇಶ ಮದಕಟ್ಟಿ, ರಾಜಕುಮಾರ ಬಿರಾದಾರ, ಸಂಗಮೇಶ ಗುಮ್ಮೆ, ಹಣಮಂತ ಕಾರಾಮುಂಗೆ, ಧನರಾಜ ಪಾಟೀಲ, ಮಹಾದೇವ ಮಡಿವಾಳ, ಗಣೇಶ ಪಾಟೀಲ, ಕಾಶಿನಾಥ ಲದ್ದೆ, ಚಂದ್ರಕಾಂತ ತಳವಾಡೆ, ಸುರೇಶ ಕುಡತೆ ಹಾಗೂ ದೀಪಕ ಠಮಕೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT