ಬೀದರ್: ನಗರದ ವಿವಿಧೆಡೆ ಭಾನುವಾರ ಸಂಜೆ ಧಾರಾಕಾರ ಮಳೆಯಾಗಿದೆ. ಶುಕ್ರವಾರ, ಶನಿವಾರವೂ ಮಳೆಯಾಗಿತ್ತು.
ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಬಸವೇಶ್ವರ ವೃತ್ತ, ಹಾರೂರಗೇರಿ , ಗುಂಪಾ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಅರ್ಧ ಗಂಟೆಗೂ ಹೆಚ್ಚಿನ ಸಮಯ ಮಳೆ ಸುರಿಯಿತು.
ಮಳೆಯ ರಭಸಕ್ಕೆ ರಸ್ತೆಯಲ್ಲಿ ಬಿದ್ದ ತಗ್ಗು ಗುಂಡಿಗಳಲ್ಲಿ ನೀರು ಸಂಗ್ರಹವಾಗಿ ವಾಹನ ಸವಾರರು ಪರದಾಡುವಂತಾಯಿತು. ಇನ್ನೂ ಸೋಮವಾರ ರಕ್ಷಾ ಬಂಧನವಿದ್ಧ ಪ್ರಯುಕ್ತ ತಳ್ಳು ಗಾಡಿಯಲ್ಲಿ, ರಸ್ತೆಯ ಪಕ್ಕದಲ್ಲಿ ಮಾರಾಟಗಾರರಿಗೆ ತೀವ್ರ ಸಂಕಷ್ಟವಾಯಿತು.
ಬೀದರ್‌ನಲ್ಲಿ ಭಾನುವಾರ ಸುರಿದ ಮಳೆ ಪರಿಣಾಮ ಜಲಾವೃತವಾಗಿರು ರಸ್ತೆ