ಭಗವಂತ ಖೂಬಾ ಅದ್ಧೂರಿ ಮೆರವಣಿಗೆ

ಬುಧವಾರ, ಜೂನ್ 19, 2019
27 °C
ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ; ಡಿಜೆ ಸಂಗೀತದ ತಾಳಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದ ಯುವಕರು

ಭಗವಂತ ಖೂಬಾ ಅದ್ಧೂರಿ ಮೆರವಣಿಗೆ

Published:
Updated:
Prajavani

ಬೀದರ್: ಬೀದರ್ ಕ್ಷೇತ್ರದಿಂದ ಬಿಜೆಪಿಯ ಭಗವಂತ ಖೂಬಾ ಲೋಕಸಭೆಗೆ ಪುನರಾಯ್ಕೆಯಾದ ಪ್ರಯುಕ್ತ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಗುರುವಾರ ವಿಜಯೋತ್ಸವ ಆಚರಿಸಿದರು.

ಫಲಿತಾಂಶ ಘೋಷಣೆ ಆಗುತ್ತಿದ್ದಂತೆಯೇ ಬಿವಿಬಿ ಕಾಲೇಜಿನ ಮತ ಎಣಿಕೆ ಕೇಂದ್ರದ ಎದುರು ಜಮಾಯಿಸಿದ ಕಾರ್ಯಕರ್ತರು ಪಟಾಕಿ ಸಿಡಿಸಿದರು. ಪರಸ್ಪರ ಗುಲಾಲು ಎರಚಿ, ಸಿಹಿ ತಿನ್ನಿಸಿ ಸಂತಸ ಹಂಚಿಕೊಂಡರು.

ಮತ ಎಣಿಕೆ ಕೇಂದ್ರದಿಂದ ಹೊರ ಬಂದ ನೂತನ ಸಂಸದ ಭಗವಂತ ಖೂಬಾ ಅವರಿಗೆ ಹೂಮಾಲೆ ಹಾಕಿ, ಗುಲಾಲು ಎರಚಿ ಅಭಿನಂದಿಸಿದರು. ಭುಜದ ಮೇಲೆ ಎತ್ತಿಕೊಂಡು ಸಂಭ್ರಮಿಸಿದರು. ಮತ ಎಣಿಕೆ ಕೇಂದ್ರದಿಂದ ನಗರದ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದಲ್ಲಿ ಖೂಬಾ ಅವರ ಮೆರವಣಿಗೆ ನಡೆಸಿದರು.

ತೆರೆದ ವಾಹನದಲ್ಲಿ ಭಗವಂತ ಖೂಬಾ ಅವರೊಂದಿಗೆ ಔರಾದ್ ಶಾಸಕ ಪ್ರಭು ಚವಾಣ್, ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪೂರೆ, ಮಾಜಿ ಸದಸ್ಯ ಅಮರನಾಥ ಪಾಟೀಲ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಮುಖಂಡರಾದ ಗುರುನಾಥ ಕೊಳ್ಳೂರು, ಡಿ.ಕೆ. ಸಿದ್ರಾಮ, ಬಾಬುವಾಲಿ, ಜಗದೀಶ ಖೂಬಾ, ಬಾಬುರಾವ್ ಮದಕಟ್ಟಿ, ಈಶ್ವರಸಿಂಗ್ ಠಾಕೂರ್‌ ಮೊದಲಾದವರು ಇದ್ದರು.

ಖೂಬಾ ಅವರು ವಿಜಯದ ಸಂಕೇತ ತೋರಿಸಿ ಕಾರ್ಯಕರ್ತರ ಉತ್ಸಾಹ ಹೆಚ್ಚಿಸಿದರು. ಜನರತ್ತ ಕೈಮುಗಿದು ಕೃತಜ್ಞತೆ ಅರ್ಪಿಸಿದರು. ತೆರೆದ ವಾಹನದ ಹಿಂದೆ ಸಾಲು ಸಾಲು ಕಾರುಗಳು ಇದ್ದವು. ಕಾರ್ಯಕರ್ತರು ಪಕ್ಷದ ಧ್ವಜ ಹಿಡಿದು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಡಿಜೆ ಸಂಗೀತದ ತಾಳಕ್ಕೆ ಹೆಜ್ಜೆ ಹಾಕಿದರು. ಅನೇಕರು ಮೈ ಮರೆತು ಕುಣಿದು ಕುಪ್ಪಳಿಸಿ ಪಕ್ಷಾಭಿಮಾನ ಮೆರೆದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !