ಕಿಡ್ನಿ ವೈಫಲ್ಯ: ₹50 ಸಾವಿರ ನೆರವು

ಜನವಾಡ: ಕಿಡ್ನಿ ವೈಫಲ್ಯಕ್ಕೆ ಒಳಗಾದ ಬಡ ಯುವಕರೊಬ್ಬರಿಗೆ ₹50 ಸಾವಿರ ವೈಯಕ್ತಿಕ ನೆರವು ನೀಡುವ ಮೂಲಕ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಷನ್ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.
ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬೀದರ್ ತಾಲ್ಲೂಕಿನ ಚೊಂಡಿಯದ ಸಂತೋಷ ಮಾರುತಿ ಅವರ ಮನೆಗೆ ಭೇಟಿ ನೀಡಿದ ಅವರು, ಧನ ಸಹಾಯ ಮಾಡಿದರು.
ನನಗೆ ಪತ್ನಿ, ಇಬ್ಬರು ಮಕ್ಕಳು ಇದ್ದಾರೆ. ಕಿಡ್ನಿ ವೈಫಲ್ಯದಿಂದ ಬಹಳ ಸಂಕಷ್ಟಕ್ಕೆ ಸಿಲುಕಿದ್ದೇನೆ ಎಂದು ಮೂಲತಃ ಚಟ್ನಳ್ಳಿ ಗ್ರಾಮದವರಾದ ಸಂತೋಷ ಮಾರುತಿ ಅಳಲು ತೋಡಿಕೊಂಡರು.
ವೈಯಕ್ತಿಕವಾಗಿ ₹50 ಸಾವಿರ ಕೊಟ್ಟು, ಸರ್ಕಾರದಿಂದಲೂ ಸಾಧ್ಯವಾದ ನೆರವು ದೊರಕಿಸಿಕೊಡುವ ಭರವಸೆ ನೀಡಿದ ಸೂರ್ಯಕಾಂತ ಅವರಿಗೆ ಸಂತೋಷ ಹಾಗೂ ಜಾನಪದ ಕಲಾವಿದರಾದ ಅವರ ಮಾವ ಶಂಕರ ಚೊಂಡಿ ಕೃತಜ್ಞತೆ ಅರ್ಪಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.