ಕೊಳಾರ(ಕೆ)(ಜನವಾಡ): ಪರಸ್ಪರ ಪ್ರೀತಿ, ವಿಶ್ವಾಸ, ಸೌಹಾರ್ದದ ಬದುಕಿಗಾಗಿ ಅವಿಭಕ್ತ ಕುಟುಂಬ ಸಂಸ್ಕೃತಿ ಬೆಳೆಯಬೇಕು ಎಂದು ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಆಶ್ರಮದ ಪೀಠಾಧಿಪತಿ ಬಸವಲಿಂಗ ಅವಧೂತರು ಹೇಳಿದರು.

ಬೀದರ್ ತಾಲ್ಲೂಕಿನ ಕೊಳಾರ(ಕೆ) ಗ್ರಾಮದಲ್ಲಿ ಸಾಯಿ ಬಾಬಾ ಮಂದಿರದ ಜಾತ್ರೆ ಪ್ರಯುಕ್ತ ಮಂಗಳವಾರ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಅವಿಭಕ್ತ ಕುಟುಂಬದಲ್ಲಿ ಮಕ್ಕಳಿಗೆ ಹಿರಿಯರ ಪ್ರೀತಿ, ಮಾರ್ಗದರ್ಶನ ಸಿಗುತ್ತದೆ. ಹೀಗಾಗಿ ಒಟ್ಟಿಗೆ ಜೀವನ ಸಾಗಿಸಿ ಮುಂದಿನ ಪೀಳಿಗೆಗೆ ಮಾದರಿ ಆಗಬೇಕು. ಇಂದಿನ ಮಕ್ಕಳಿಗೆ ಮನೆಯಲ್ಲಿ ಉತ್ತಮ ಸಂಸ್ಕಾರ ಸಿಗದ ಕಾರಣ ಮದುವೆಯಾದ ಕೆಲವೇ ದಿನಗಳಲ್ಲಿ ವಿಚ್ಛೇದನಗಳಾಗುತ್ತಿವೆ ಎಂದು ಹೇಳಿದರು.

ಒತ್ತಡದ ಜೀವನದಿಂದ ಮನುಷ್ಯ ಅನೇಕ ರೋಗಗಳಿಗೆ ಒಳಗಾಗುತ್ತಿದ್ದಾನೆ. ಒತ್ತಡ ಮುಕ್ತಿ ಹಾಗೂ ಸುಂದರ ಜೀವನಕ್ಕೆ ಪ್ರವಚನ, ಪುರಾಣಗಳನ್ನು ಆಲಿಸಬೇಕು. ತಂದೆ-ತಾಯಿ ಸೇವೆ ಮಾಡಬೇಕು ಎಂದು ಸಲಹೆ ನೀಡಿದರು.

ಡಾ. ಶ್ರೇಯಸ್ ಹೆಬ್ಬಾಳಕರ್ ಮಾತನಾಡಿದರು. ಇದಕ್ಕೂ ಮುನ್ನ ಬಸವಲಿಂಗ ಅವಧೂತರು ಸಾಯಿಬಾಬಾ ಅವರ ಮೂರ್ತಿಗೆ ಪೂಜೆ ಸಲ್ಲಿಸಿದರು.

ದೇವಸ್ಥಾನದ ದಿಲೀಪ್ ವಡಗಾವೆ, ಅಮರ ವಡಗಾವೆ, ಅನಿಲ್ ಕೋಟೆ, ಶಂಕರ ಸಿಂಧೆ, ಸಂತೋಷ್ ಸ್ವಾಮಿ, ಶಂಕ್ರಣ್ಣ ಕೊಳಾರ, ರಾಹುಲ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-33-320835437

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.