ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನ ಸಾಹಿತ್ಯ ಮೌಢ್ಯತೆಯ ವಿರೋಧಿ :ಸಾಹಿತಿ ಕುಂ.ವೀರಭದ್ರಪ್ಪ

ವಚನ ಸಾಹಿತ್ಯ ಸಮ್ಮೇಳನ: ಕಾದಂಬರಿಕಾರ ಕುಂ.ವೀರಭದ್ರಪ್ಪ ಅಭಿಮತ
Last Updated 22 ಜನವರಿ 2020, 12:02 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ಬಸವಾದಿ ಶರಣರು ರಚಿಸಿದ ವಚನ ಸಾಹಿತ್ಯ ಮೌಢ್ಯತೆಯ ವಿರೋಧಿಯಾಗಿದೆ. ಆದರೆ, ಇಂದು ಮೌಢ್ಯತೆ ವಿರೋಧಿಸುವವರಿಗೆ ಕಠಿಣ ಶಿಕ್ಷೆಯಾಗುವ ಪರಿಸ್ಥಿತಿ ಎದುರಾಗಿದೆ’ ಎಂದು ಸಾಹಿತಿ ಕುಂ.ವೀರಭದ್ರಪ್ಪ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಸಸ್ತಾಪುರದಲ್ಲಿ ಮಂಗಳವಾರ ನಡೆದ ಯಲ್ಲಾಲಿಂಗೇಶ್ವರರ 34ನೇ ಸ್ಮರಣೋತ್ಸವ ಹಾಗೂ ಜಿಲ್ಲಾ 8ನೇ ಆಧುನಿಕ ವಚನ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ವಚನ ಸಾಹಿತ್ಯ ಜನಮುಖಿ ಸಾಹಿತ್ಯವಾಗಿದೆ. ಈ ಸಾಹಿತ್ಯದಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಂಡಿತು. ಇದೇ ನೆಲದಲ್ಲಿದ್ದ ಬಸವಣ್ಣನವರು 750 ವಚನಕಾರರನ್ನು ಸೃಷ್ಟಿಸಿದರು. 500 ಮಹಿಳೆಯರನ್ನು ಅಕ್ಷರಸ್ಥರನ್ನಾಗಿ ಮಾಡಿದರು. ಜಾತಿ ಎಣಿಸದೆ ಸಮಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದರು. ಈ ಕಾರಣದಿಂದ ಕರ್ನಾಟಕ ವೈಚಾರಿಕವಾಗಿ ಸಮೃದ್ಧ ನಾಡಗಿದೆ’ ಎಂದು ಹೇಳಿದರು.

ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಸಸ್ತಾಪುರ ಡಾ.ಈಶ್ವರಾನಂದ ಸ್ವಾಮೀಜಿ, ರತ್ನಾಕಾಂತ ಶಿವಯೋಗಿ, ಸಯೋಜಕ ಡಾ.ಗವಿಸಿದ್ದಪ್ಪ ಪಾಟೀಲ ಹಾಗೂ ನಿಕಟಪೂರ್ವ ಅಧ್ಯಕ್ಷ ಮಾಣಿಕರಾವ್ ಬಿರಾದಾರ ಮಾತನಾಡಿದರು.

ಶರಣೆ ಮಹಾದೇವಿತಾಯಿ, ಸಸ್ತಾಪುರ ಸದಾನಂದ ಅಪ್ಪಗಳು, ಶಾಸಕ ಬಿ.ನಾರಾಯಣರಾವ್, ಜಿಲ್ಲಾ ಪಂಚಾಯಿತಿ ಸದಸ್ಯೆ ನಿರ್ಮಲಾ ಮಾನಿಗೋಪಾಳೆ, ಮುಖಂಡರಾದ ಶರಣು ಸಲಗರ, ಪ್ರಾಚಾರ್ಯ ನಾಗೇಂದ್ರ ಢೋಲೆ, ಸಿದ್ರಾಮಪ್ಪ ಗುದಗೆ, ಬಾಬುರೆಡ್ಡಿ ಚಾಮಾಲೆ, ಷಣ್ಮುಖಪ್ಪ ಬೊಕ್ಕೆ, ನಾಗಪ್ಪ ಚಾಮಾಲೆ, ಗೌಡಪ್ಪ ಪಾಟೀಲ, ಚಂದ್ರಪ್ಪ ಹೆಬ್ಬಾಳಕರ, ಹಂಸಕವಿ, ವಜ್ರಾ ಪಾಟೀಲ ಪಾಲ್ಗೊಂಡಿದ್ದರು. ಶರಣೆ ಮಹಾದೇವಿತಾಯಿ ಅವರ 55 ನೇ ಜನ್ಮದಿನದ ಅಂಗವಾಗಿ ಅವರ ತುಲಾಭಾರ ನೆರವೆರಿಸಲಾಯಿತು.

ವಚನವಾಚನ: ಸಿದ್ಧರಾಮ ಹೊನ್ಕಲ್ ಅಧ್ಯಕ್ಷತೆಯಲ್ಲಿ ವಚನವಾಚನಗೋಷ್ಠಿ ನಡೆಯಿತು.

ಆಶಯನುಡಿ ನುಡಿದ ಹಿರಿಯ ಸಾಹಿತಿ ಡಾ.ಕಾಶಿನಾಥ ಅಂಬಲಗೆ ಅವರು, ‘ಯುವಕರು ಆಧುನಿಕ ವಚನಗಳನ್ನು ರಚಿಸುವಲ್ಲಿ ಆಸಕ್ತಿ ತೋರುತ್ತಿರುವುದು ಉತ್ತಮ ಬೆಳವಣಿಗೆ’ ಎಂದರು.

ಶಂಭುಲಿಂಗ ವಾಲ್ದೊಡ್ಡಿ, ಭೀಮಶೇನ್ ಗಾಯಕವಾಡ, ಸಂಜೀವಕುಮಾರ ನಡುಕರ್ ಮಾತನಾಡಿದರು. ವೀರಣ್ಣ ಮಂಠಾಳಕರ್, ಮಚೇಂದ್ರ ಅಣಕಲ್, ಎಂ.ಆರ್.ಶ್ರೀಕಾಂತ, ಶಿವಸ್ವಾಮಿ ಚೀನಕೇರಾ, ಚನ್ನಮ್ಮ ವಲ್ಲೇಪುರೆ, ಎಸ್.ಎಸ್,ದೊಡ್ಮನಿ, ಶೀಲಾ ಜೂಜಾ, ಸಂಗಮ್ಮ ಬಮ್ಮಣೆ, ಮಾಯಾದೇವಿ ಗೋಖಲೆ, ಎನ್,ಅಜೀತ್, ಸಂತೋಷಕುಮಾರ ಕರಹರಿ, ಸಾರಿಕಾ ಗಂಗಾ, ಅವಿನಾಶ ಸೋನೆ ಆಧುನಿಕ ವಚನಗಳನ್ನು ವಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT