ಜಾತ್ಯತೀತ ನಿಲುವು ಪ್ರತಿಪಾದಿಸಿದ ಕುವೆಂಪು: ಸಾಹಿತಿ ಭಾರತಿ ವಸ್ತ್ರದ ಅಭಿಮತ

7

ಜಾತ್ಯತೀತ ನಿಲುವು ಪ್ರತಿಪಾದಿಸಿದ ಕುವೆಂಪು: ಸಾಹಿತಿ ಭಾರತಿ ವಸ್ತ್ರದ ಅಭಿಮತ

Published:
Updated:
Prajavani

ಬೀದರ್: ‘ಕುವೆಂಪು ಅವರು ವಿಶ್ವಮಾನವ ಸಂದೇಶ ಸಾರುವ ಮೂಲಕ ಜಾತ್ಯತೀತ ನಿಲುವು ಪ್ರತಿಪಾದಿಸಿದ್ದಾರೆ’ ಎಂದು ಸಾಹಿತಿ ಭಾರತಿ ವಸ್ತ್ರದ ಹೇಳಿದರು.

ನಗರದ ನಂದಿ ಕಾಲೊನಿಯ ಪಟಪಳ್ಳಿ ನಿವಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಘಟಕ ವತಿಯಿಂದ ಕುವೆಂಪು ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಆಧುನಿಕ ಕಾಲದಲ್ಲಿ ಮಹಾಕಾವ್ಯ ನಿಂತೆ ಹೋಯಿತು ಎನ್ನುವಾಗ ಕುವೆಂಪು ಅವರು ಮಹಾ ಕಾವ್ಯ ರಚಿಸಿದ್ದು, ಚಾರಿತ್ರಿಕವಾಗಿ ಮಹತ್ವ ಪಡೆಯಿತು. ಕುವೆಂಪು ಅವರು ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ ಮೂಲಕ ಒಂದು ಕಾಲದ ಜೀವನ ವಿಧಾನಗಳನ್ನು ಕಟ್ಟಿಕೊಟ್ಟ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆ’ ಎಂದು ಬಣ್ಣಿಸಿದರು.

‘ಇತ್ತೀಚಿನ ದಿನಗಳಲ್ಲಿ ಉತ್ಕೃಷ್ಟವಾದ ಸಾಹಿತ್ಯ ಕೃತಿಗಳು ಹೊರಬರುತ್ತಿಲ್ಲ. ಓದುಗರ ಸಂಖ್ಯೆಯೂ ಕ್ಷೀಣಿಸಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಲೇಖಕಿಯರ ಸಂಘ ಜಿಲ್ಲಾ ಘಟಕದ ಅಧ್ಯಕ್ಷೆ ಕಸ್ತೂರಿ ಎಸ್.ಪಟಪಳ್ಳಿ ಮಾತನಾಡಿ, ‘ಕುವೆಂಪು ತಮ್ಮ ಕಾವ್ಯದ ಮೂಲಕ ವಿಶ್ವಮಾನವ ತತ್ವವನ್ನು ಅರ್ಥಪೂರ್ಣವಾಗಿ ನಿರೂಪಿಸಿದ್ದಾರೆ. ಅವರ ಬದುಕು ಬರಹ ಒಂದೇ ಆಗಿದ್ದವು ’ ಎಂದು ಹೇಳಿದರು.

ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷೆ ಪಾರ್ವತಿ ಸೋನಾರೆ ಮಾತನಾಡಿ, ‘ಕುವೆಂಪು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೃಷಿಗೈದಿದ್ದು 80ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಅವರ ಸಾಹಿತ್ಯದಲ್ಲಿ ವೈಚಾರಿಕ ಪ್ರಖರತೆ, ಜೀವನಾದರ್ಶ, ಅದಮ್ಯವಾದ ಜೀವನ ಪ್ರೀತಿ ರಾಷ್ಟ್ರೀಯತೆ ವಿಶೇಷವಾಗಿ ಜಾತ್ಯತೀತ ನಿಲುವು ಪ್ರತಿಪಾದಿತವಾಗಿವೆ’ ಎಂದು ಹೇಳಿದರು.

ಸಾಹಿತಿ ವಿದ್ಯಾವತಿ ಹಿರೇಮಠ, ರಜಿಯಾ ಬಳಬಟ್ಟಿ, ಸಾಧನಾ ರಂಜೋಳಕರ್, ಲಲಿತಾ ಕಮಲಾಪುರೆ , ವೀರಶೆಟ್ಟಿ ಚನಶಟ್ಟಿ , ಬಸವರಾಜ ಬಲ್ಲೂರ, ಓಂಕಾರ ಪಾಟೀಲ ಇದ್ದರು.

ಸಚಿನ ವಿಶ್ವಕರ್ಮ ಸ್ವಾಗತಿಸಿದರು. ವಿದ್ಯಾವತಿ ಬಲ್ಲೂರ ನಿರೂಪಿಸಿದರು. ಟಿ.ಎಂ ಮಚ್ಚೆ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !