ಔರಾದ್: ಸಂತಪೂರದ ಮಹಿಳಾ ಚೈತನ್ಯ ಯುವತಿ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಈಚೆಗೆ ತಾಲ್ಲೂಕಿನ ಲಾಧಾದಲ್ಲಿ ಜಾನಪದ ಉತ್ಸವ ನಡೆಯಿತು.

ಮುಖಂಡ ಬಾಬುರಾವ ಮುಚಳಂಬೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,‘ಗ್ರಾಮೀಣ ಭಾಗದ ಕಲೆ ಮತ್ತು ಸಂಸ್ಕೃತಿ ನಮ್ಮ ನೆಲದ ಗುರುತಾಗಿದ್ದು, ಹಿಂದೆ ಜನಪದ ಕಲಾವಿದರು ವಿವಿಧ ಕಲೆಗಳನ್ನು ಪ್ರದರ್ಶಿಸುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಟಿವಿ ಮತ್ತು ಮೊಬೈಲ್ ಪ್ರಭಾವದಿಂದ ಜನಪದ ಕಲೆಗಳು ಪರದೆಯೊಳಗೆ ಸೀಮಿತವಾಗುತ್ತಿವೆ’ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಂ.ಎಸ್. ಮನೋಹರ, ‘ಜನಪದ ಕಲೆ ನಮ್ಮ ಸಂಸ್ಕೃತಿಯ ತಾಯಿ ಬೇರು. ಜನರ ಬಾಯಿಂದ ಬಂದದ್ದೇ ಜನಪದ. ನಮ್ಮ ತಾಯಂದಿರು ಅಕ್ಷರಜ್ಞಾನ ಇಲ್ಲದಿದ್ದರೂ ಜೋಗುಳ, ಬೀಸು-ಕುಟ್ಟುವ ಪದ, ಮದುವೆ ಹಾಡು, ಗೌರಿ ಹಾಡು ಸೇರಿದಂತೆ ಅನೇಕ ಜನಪದ ಗೀತೆಗಳ ಮೂಲಕ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದ್ದಾರೆ ಎಂದರು.

ಮಲ್ಲಿಕಾರ್ಜುನ ಬಾಬಳಿ, ರಮೇಶ್ ಮಾತನಾಡಿ ಮಾತನಾಡಿದರು. ಚಿನ್ನಮ್ಮ ದೂಡ್ಡಮನಿ, ಶಾಮ ಮತ್ತಿತರರು ಇದ್ದರು.

ಕಲಾವಿದ ದೇವಿದಾಸ ಚಿಮಕೋಡ, ಕಲಾವತಿ ಕಾಶಿನಾಥ, ಶಾಮುವೇಲ್ ನಾಗೋರ, ರುಕ್ಮಿಣಿ ಗೌರಮ್ಮ ತಂಡದಿಂದ ನೃತ್ಯ, ಕೋಲಾಟ ಪ್ರದರ್ಶನ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-33-803477886

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.