ಶುಕ್ರವಾರ, ನವೆಂಬರ್ 22, 2019
22 °C

ಮನಸ್ಸಿನ ನಿಯಂತ್ರಣವೇ ಸಾಧನೆ: ಸ್ವಾಮೀಜಿ

Published:
Updated:
Prajavani

ಕಮಲನಗರ : ಮನಸ್ಸಿನ ನಿಯಂತ್ರಣವೇ ಮನುಷ್ಯನ ಸಾಧನೆ. ಮನಸ್ಸು ಸಕಾರಾತ್ಮಕವಾಗಿದ್ದರೆ ವ್ಯಕ್ತಿತ್ವ ವಿಕಾಸವಾಗುತ್ತದೆ. ನಕಾರಾತ್ಮಕವಾಗಿದ್ದರೆ ಅವನತಿ ಎಂದು ಬಸವಕಲ್ಯಾಣದ ನಿರಂಜನ ಮಹಾಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಠಾಣಾಕುಶನೂರು ಗ್ರಾಮದ ನೂತನ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ಯಾಮರಾವ ಪ್ರೌಢ ಶಾಲೆ ಆಶ್ರಯದಲ್ಲಿ ವ್ಯಕ್ತಿತ್ವ ವಿಕಸನ ಕುರಿತು ಸೋಮವಾರ ನಡೆದ ಚಿಂತನ ಕಾರ್ಯಕ್ರಮದ ಮಾತನಾಡಿದ  ಮನಸ್ಸು ಹತೋಟಿಯಲ್ಲಿದ್ದರೆ ಮಾತ್ರ ಸಾಧನೆ ಸಾಧ್ಯ ಎಂದರು.

ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಶಿವಶರಣಪ್ಪ ವಲ್ಲೇಪುರೆ ಪ್ರಾಸ್ತವಿಕ ಮಾತನಾಡಿ, ಗಳಿಸಿದ ಜ್ಞಾನವನ್ನು ಸಮಯೋಚಿತವಾಗಿ ಎಷ್ಟರಮಟ್ಟಿಗೆ ಬಳಸಿಕೊಳ್ಳುತ್ತೇವೆ ಎಂಬುದೇ ಮಾನಸಿಕ ಶಕ್ತಿ ಎಂದು ತಿಳಿಸಿದರು.

ಸಂಸ್ಥೆಯ ಅಧ್ಯಕ್ಷರಾದ ಶರಣಪ್ಪ ಕೊಂಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಜ್ಯೋತ್ಸವ ಪ್ರಶಸ್ತಿ ಪಡೆದ ಠಾಣಾಕುಶನೂರು ಗ್ರಾಮದ ಶಿಕ್ಷಣ ಕ್ಷೇತ್ರದಲ್ಲಿ ಹಾಗೂ ಸಾಮಾಜಿಕ  ಕಾರ್ಯ ಚಟುವಟಿಕೆಗಳಲ್ಲಿ ಗಣನೀಯ ಸೇವೆ ಮಾಡಿರುವ ರಾಮಶೇಟ್ಟಿ ಪನ್ನಾಳೆಯವರನ್ನು ಸನ್ಮಾನಿಸಲಾಯಿತು.

ಮುಖ್ಯಶಿಕ್ಷಕ ಪಂಡರಿ ಸಾಕರೆ, ರಾಜಕುಮಾರ ತಳವಾಡೆ, ಬಸವರಾಜ ಮಾಳಗೆ, ಬಸವರಾಜ ಕಾಪಸೆ, ಶೋಬಾವತಿ ರಾಜಪುರೆ ಇದ್ದರು. ಶಿವಶರಣಪ್ಪ ವಲ್ಲೇಪುರೆ ನಿರೂಪಿಸಿದರು. ಪಂಡರಿ ಸ್ವಾಗತಿಸಿದರು. ಬಾಬುರಾವ ಜಾಧವ ವಂದಿಸಿದರು.  ಶಾಲೆ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಗ್ರಾಮಸ್ಥರು ಭಾಗವಹಿಸಿದರು.

ಪ್ರತಿಕ್ರಿಯಿಸಿ (+)