ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಉತ್ತಮ ಜೀವನ ಶೈಲಿಗೆ ಉತ್ತಮ ಆರೋಗ್ಯ’

Published 2 ಆಗಸ್ಟ್ 2024, 16:00 IST
Last Updated 2 ಆಗಸ್ಟ್ 2024, 16:00 IST
ಅಕ್ಷರ ಗಾತ್ರ

ಬೀದರ್‌: ‘ಪ್ರತಿಯೊಬ್ಬರೂ ಉತ್ತಮ ಜೀವನ ಶೈಲಿ ಬೆಳೆಸಿಕೊಂಡರೆ ಆರೋಗ್ಯ ಕೂಡ ಉತ್ತಮವಾಗಿರುತ್ತದೆ’ ಎಂದು ಹೃದಯ ರೋಗ ತಜ್ಞ ಡಾ. ರಾಜಶೇಖರ ಪಾಟೀಲ ತಿಳಿಸಿದರು.

ದಿವಂಗತ ಕಲ್ಲಪ್ಪ ಚಿದ್ರಿ ಅವರ 50ನೇ ಪುಣ್ಯ ಸ್ಮರಣೆ ಅಂಗವಾಗಿ ಜೆ.ಪಿ. ನಗರದಲ್ಲಿ ಹಮ್ಮಿಕೊಂಡಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ರೋಗ, ಯಕೃತ್ತಿನ ಕಾಯಿಲೆಗಳಿಗೆ ಬದಲಾದ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯೇ ಕಾರಣ. ಜನರು ಕೇವಲ ಔಷಧಿ ಮೇಲೆ ಅವಲಂಬಿತರಾಗದೇ ಜೀವನ ಶೈಲಿ ಬದಲಿಸಿಕೊಳ್ಳಬೇಕು. ನಿತ್ಯ ಯೋಗ, ನಡಿಗೆ, ಪ್ರಾಣಾಯಾಮ, ಧ್ಯಾನ ಮಾಡಿ ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಡಾ. ವೈಜಿನಾಥ್‌ ತೂಗಾಂವೆ, ಡಾ. ಸುಧೀರ್ ಕಾಮತಿಕರ್, ಡಾ. ಪ್ರಭುಶೆಟ್ಟಿ ಚಿದ್ರಿ, ನಿವೃತ್ತ ಅಧಿಕಾರಿ ವೀರಭದ್ರಪ್ಪ ಉಪ್ಪಿನ್, ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅರವಿಂದ ಕುಲಕರ್ಣಿ, ಮುಕುಂದ್‌ ಹುಂಡೇಕರ್, ಸಂಜೀವಕುಮಾರ್ ಬುಯ್ಯ, ಡಾ. ದೀಪಾ ನಂದಿ, ಸುನೀಲ್ ಚಿದ್ರಿ, ಪ್ರವೀಣ್ ಗುರುಮಿಠಕಲ್, ಭದ್ರಯ್ಯ ಸ್ವಾಮಿ, ಶಾಂತಕುಮಾರ ದೊಡ್ಡಿ, ಸೈಫ್ ಅಲಿ, ವೆಂಕಟರಾವ್ ಕುಲಕರ್ಣಿ, ಡಾ. ಸುಶಾಂತ್ ಚಿದ್ರಿ, ಉದಯ ಉದಗೀರೆ, ಆರ್ಯ, ಗೌರೀಶ್, ಶೌಕತ್ ಅಲಿ, ಗಂಗೂಲಿ, ಭವಾನಿ, ಚಂದು ಮೋರ್ಗೆ, ಪಕ್ಕಪ್ಪ ಕಾಡವಾದ, ಯಲಪ್ಪ ಹಾಜರಿದ್ದರು. 165 ಜನರ ಆರೋಗ್ಯ ತಪಾಸಣೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT