ಬುಧವಾರ, ಜನವರಿ 29, 2020
30 °C

ಉತ್ತಮ ಸಮಾಜ ನಿರ್ಮಾಣದಲ್ಲಿ ಸಾಹಿತಿ ಪಾತ್ರ ಮುಖ್ಯ: ಮಲ್ಲಿಕಾರ್ಜುನ ಪಂಚಾಳ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಟಗುಪ್ಪ: ‘ಆದರ್ಶ ಸಮಾಜ ನಿರ್ಮಿಸುವಲ್ಲಿ ಚುಟುಕು ಸಾಹಿತ್ಯ ಮತ್ತು ಸಾಹಿತಿಗಳ ಪಾತ್ರ ಮಹತ್ವದ್ದಾಗಿದೆ’ ಎಂದು ಮುಖ್ಯಶಿಕ್ಷಕ ಮಲ್ಲಿಕಾರ್ಜುನ ಪಂಚಾಳ್ ಹೇಳಿದರು.

ಪಟ್ಟಣದಲ್ಲಿ ಭಾನುವಾರ ನಡೆದ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಬೀದರ್ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಜೀವನದ ಸಿಹಿ-ಕಹಿ ಅನುಭವಗಳು ಸ್ವಾರಸ್ಯಕರವಾಗಿ ಓದುಗರಿಗೆ ಉಣಬಡಿಸುವ ಸಾಹಿತ್ಯವೇ ಚುಟುಕು ಸಾಹಿತ್ಯವಾಗಿದ್ದು, ಆಧುನಿಕ ಸಮಾಜದಲ್ಲಿ ತಂತ್ರಜ್ಞಾನದ ಪ್ರಭಾವದಲ್ಲಿ ಚುಟುಕು ಬರಹಗಳಿಗೆ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ. ಹೀಗಾಗಿ ಬರಹಗಾರರು ಇದರ ಸದ್ಬಳಕೆ ಮಾಡಿಕೊಳ್ಳಬೇಕು’
ಎಂದರು.

ನಿವೃತ್ತ ಶಿಕ್ಷಕ ಮಹಾರುದ್ರಪ್ಪ ಆಣದೂರ್, ತಿಪ್ಪಣ್ಣ ಶರ್ಮಾ, ಚನ್ನಮಲ್ಲಪ್ಪ ಅಂಬಲಗಿ, ರಾಜಕುಮಾರ ಉಪ್ಪಿನ್, ರಾಮದಾಸ ಮಂಕಲ್, ನಟವರ ಪವಾರ್, ಚಂದ್ರಕಾಂತ ಕೋರಿ, ಮನೋಹರ ಜಕ್ಕಾ, ಸುರೇಶ್ ಚೌದರಿ, ಭೀಮಶೆಟ್ಟಿ, ಇಂದುಮತಿ, ಉಮೇಶ್, ಪಂಡರಿ, ಸೂರ್ಯಕಾಂತ, ಶಾಮರಾವ್ ಹಡಪದ ಹಾಗೂ
ಶೈಲಜಾ ಇದ್ದರು.

ಭೀಮಶೆಟ್ಟಿ ವಡ್ಡನಕೇರಾ ನಿರೂಪಿಸಿದರು. ರಾಜಕುಮಾರ ಉಪ್ಪಿನ ಸ್ವಾಗತಿಸಿದರು. ಇಂದುಮತಿ ವಂದಿಸಿದರು.

ಪ್ರತಿಕ್ರಿಯಿಸಿ (+)