ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧು ಬಂಗಾರಪ್ಪ ಇಂದು ಬೀದರ್‌ಗೆ

Last Updated 9 ಜನವರಿ 2023, 13:40 IST
ಅಕ್ಷರ ಗಾತ್ರ

ಬೀದರ್: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಇತರ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಮಧು ಬಂಗಾರಪ್ಪ ಅವರು ಮಂಗಳವಾರ (ಜ.10) ನಗರಕ್ಕೆ ಬರಲಿದ್ದಾರೆ.

ಬೆಳಿಗ್ಗೆ 11.30ಕ್ಕೆ ನಗರದ ಪಕ್ಷದ ಜಿಲ್ಲಾ ಘಟಕದ ಕಚೇರಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಇತರ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾ ಘಟಕದ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸುವರು ಎಂದು ಪಕ್ಷದ ಇತರ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ರೆಡ್ಡಿ ಚಿಟ್ಟಾ ತಿಳಿಸಿದ್ದಾರೆ.

ವಿಭಾಗದ ಜಿಲ್ಲಾ, ತಾಲ್ಲೂಕು ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಬೀದರ್ ದಕ್ಷಿಣ ಗೊಂಡ (ಕುರುಬ) ವೇದಿಕೆ ರಚನೆ
ಬೀದರ್:
ಬೀದರ್ ದಕ್ಷಿಣ ಗೊಂಡ (ಕುರುಬ) ವೇದಿಕೆ ಅಸ್ತಿತ್ವಕ್ಕೆ ಬಂದಿದೆ.

ತಾಲ್ಲೂಕಿನ ಬುಧೇರಾ ಗ್ರಾಮದ ಗುಂಡಪ್ಪ ಬುಧೇರಾ ಅವರ ಲೇಔಟ್‍ನಲ್ಲಿ ನಡೆದ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗೊಂಡ (ಕುರುಬ) ಸಮಾಜದ ಪ್ರಮುಖರ ಸಭೆಯಲ್ಲಿ ವೇದಿಕೆ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಪದಾಧಿಕಾರಿಗಳು: ಬಾಬುರಾವ್ ಮಲ್ಕಾಪುರ (ಗೌರವಾಧ್ಯಕ್ಷ), ಗುಂಡಪ್ಪ ಬುಧೇರಾ (ಅಧ್ಯಕ್ಷ), ದತ್ತು ಕಾಡವಾದ್, ತಿಪ್ಪಣ್ಣ ಬರೀದಾಬಾದ್, ರಾಜು ಚಿಟ್ಟಾವಾಡಿ (ಉಪಾಧ್ಯಕ್ಷರು), ಸಂಜು ಅಲ್ಲೂರೆ (ಪ್ರಧಾನ ಕಾರ್ಯದರ್ಶಿ), ನರಸಪ್ಪ ಯಾಕತಪುರ (ಕಾರ್ಯದರ್ಶಿ), ಶಿವಕುಮಾರ ಸುಲ್ತಾನಪುರ (ಸಹ ಕಾರ್ಯದರ್ಶಿ), ಪ್ರಕಾಶ ಕಮಠಾಣ (ಸಂಘಟನಾ ಕಾರ್ಯದರ್ಶಿ), ಧನರಾಜ ಕಟಗಿ (ಖಜಾಂಚಿ), ಭಜರಂಗ ಕಾಶೆಂಪುರ (ಕಾನೂನು ಸಲಹೆಗಾರ), ಪಂಡಿತ ಹೊನ್ನಡ್ಡಿ, ಗಣಪತಿ ಕಮಠಾಣ, ಬಾಬುರಾವ್ ಸಂಗೊಳಗಿ, ಅಶೋಕ ಬರೀದಾಬಾದ್, ರಮೇಶ ಮರ್ಜಾಪುರ, ಲಾಲಪ್ಪ ಕಾಡವಾದ, ಶಂಕರ ಕಮಠಾಣ, ಅಶೋಕ ಸಿರ್ಸಿ(ಎ), ರಾಮಕೃಷ್ಣ ಸಿರ್ಸಿ(ಎ) ಹಾಗೂ ಸುಭಾಷ ಮರಕುಂದ (ಸದಸ್ಯರು).

ಬುಧೇರಾದಲ್ಲಿ ಸಿದ್ಧೇಶ್ವರ ಶ್ರೀಗೆ ನುಡಿ ನಮನ
ಬೀದರ್:
ತಾಲ್ಲೂಕಿನ ಬುಧೇರಾ ಗ್ರಾಮದಲ್ಲಿ ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಶ್ರೀ ಅವರಿಗೆ ನುಡಿ ನಮನ ಸಲ್ಲಿಸಲಾಯಿತು.

ಗ್ರಾಮದ ಬೋಮಗೊಂಡೇಶ್ವರ ವೃತ್ತದಲ್ಲಿ ಶ್ರೀಗಳ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷಗಳ ಮೌನ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅನೇಕ ಪ್ರಮುಖರು ಸಿದ್ಧೇಶ್ವರ ಸ್ವಾಮೀಜಿ ಅತ್ಯಂತ ಸರಳ ಬದುಕು ನಡೆಸಿದ್ದರು. ನುಡಿದಂತೆ ನಡೆದು ತೋರಿದ್ದರು. ಅವರ ತತ್ವಾದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಪ್ರಮುಖರಾದ ಗುಂಡಪ್ಪ ಬುಧೇರಾ, ಸಂಜು ಅಲ್ಲೂರೆ, ದೀಪಕ ಚಿದ್ರಿ, ದತ್ತು ಕಾಡವಾದ್, ತಿಪ್ಪಣ್ಣ ಬರೀದಾಬಾದ್, ರಾಜು ಚಿಟ್ಟಾವಾಡಿ, ನರಸಪ್ಪ ಯಾಕತಪುರ, ಶಿವಕುಮಾರ ಸುಲ್ತಾನಪುರ, ಪ್ರಕಾಶ ಕಮಠಾಣ, ಧನರಾಜ ಕಟಗಿ, ಭಜರಂಗ ಕಾಶೆಂಪುರ, ಪಂಡಿತ ಹೊನ್ನಡ್ಡಿ, ಗಣಪತಿ ಕಮಠಾಣ, ಬಾಬುರಾವ್ ಸಂಗೊಳಗಿ, ಅಶೋಕ ಬರೀದಾಬಾದ್, ರಮೇಶ ಮರ್ಜಾಪುರ, ಲಾಲಪ್ಪ ಕಾಡವಾದ, ಶಂಕರ ಕಮಠಾಣ, ಅಶೋಕ ಸಿರ್ಸಿ(ಎ), ರಾಮಕೃಷ್ಣ ಸಿರ್ಸಿ(ಎ) ಹಾಗೂ ಸುಭಾಷ ಮರಕುಂದ, ತಿರುಪತಿ ನಿರ್ಣಾವಾಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT