ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಣ್ಣನವರಲ್ಲಿ ಪ್ರಾರ್ಥಿಸೋಣ: ಅಕ್ಕ ಗಂಗಾಂಬಿಕೆ

ಅಂತರರಾಷ್ಟ್ರೀಯ ಲಿಂಗಾಯತ ಧರ್ಮಕೇಂದ್ರ, ಬಸವಕಲ್ಯಾಣ
Last Updated 21 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಮಹಾತ್ಮ ಬಸವೇಶ್ವರ ವಿಶ್ವಗುರು ಆಗಿದ್ದಾರೆ. ಅವರು ಸ್ಥಾಪಿಸಿದ ಲಿಂಗಾಯತ ಧರ್ಮ ಮತ್ತು ಅದರ ತತ್ವ ಸಿದ್ಧಾಂತಗಳು ಪ್ರತ್ಯೇಕ ಕರ್ಮ ಕ್ಷೇತ್ರ ಕಲ್ಯಾಣ ಕ್ರಾಂತಿಯ ರಣ ಭೂಮಿಯಿಂದ ಪ್ರಕಟವಾಗಿವೆ. ಕ್ರಿ.ಶ. 1162-67 ರ ಮಧ್ಯದಲ್ಲಿ ಬಸವೇಶ್ವರರ ನೇತೃತ್ವದಲ್ಲಿ ನಡೆದ ಪ್ರದೀರ್ಘ ಕಲ್ಯಾಣ ಕ್ರಾಂತಿಯ ಫಲ ಸ್ವರೂಪಗಳೆಂದರೆ ವಚನ ಸಾಹಿತ್ಯ, ಇಷ್ಟಲಿಂಗಯೋಗ ಮತ್ತು ಜಗತ್ತಿನ ಮೊಟ್ಟ ಮೊದಲನೆ ಪಾರ್ಲಿಮೆಂಟ್ ಮತ್ತು ಪ್ರಜಾತಂತ್ರದ ಸೂತ್ರಗಳು ಇವು ಆ ಕಾಲದ ಅವಿಮುಕ್ತ ಕ್ಷೇತ್ರ ಕಲ್ಯಾಣ ನಗರದಲ್ಲಿ ಏಷಿಯಾ ಖಂಡದ ಸು. 52 ರಾಷ್ಟ್ರಗಳಿಂದ ಬಂದು ನೆಲೆಸಿ, ಕ್ರಾಂತಿಯಲ್ಲಿ ಸಹಭಾಗಿಯಾಗಿದ್ದ 1 ಲಕ್ಷ 96 ಸಾವಿರ ಶರಣರು, ಸಂತರು, ಮಹಾತ್ಮರು, ಚಕ್ರವರ್ತಿ ಭೂಪಾಲರು ಜತೆಗೆ 770 ಅಮರಗಣಂಗಳ ಸ್ವೀಕೃತಿಯಿಂದ ಈ ತತ್ವಗಳನ್ನು ಜಗತ್ತಿನ ಕರ್ಮಕ್ಷೇತ್ರಕ್ಕೆ ಋಜುಗೊಳಿಸಲಾಗಿದೆ.

ಜೀವನಕ್ಕೆ ಸಂಬಂಧವಿಲ್ಲದ ಯಾವುದೇ ವೈಚಾರಿಕವಾದ ಬಸವಣ್ಣನವರ ತತ್ವಜ್ಞಾನದಲ್ಲಿ ಕಂಡು ಬರಲಾರವು ಸಮಾಜದ ಎಲ್ಲ ವರ್ಗದ ಜನಮಾನಸದಲ್ಲಿ ಕಾಯಕದ ಬಗ್ಗೆ ನಿಷ್ಠೆ, ವೈಯಕ್ತಿಕ ಜೀವನದಲ್ಲಿ ಪರಿಶುದ್ಧ ಆಚರಣೆ ಮತ್ತೇ ವಂಚಿತರಿಗೆ ಸಹಾಯ ಮಾಡುವ ಬುದ್ಧಿಯನ್ನು ಪ್ರತ್ಯೇಕರ ಹೃದಯದಲ್ಲಿ ಮೂಡಿಸಿದರಷ್ಟೇ. ಅಲ್ಲದೇ ಅಂಧಶ್ರದ್ಧೆ ಮತ್ತು ಪೊಳ್ಳು ಭಕ್ತಿಯ ಅಂಧಕಾರದಿಂದ ಮನುಷ್ಯರನ್ನು ಪರಾವರ್ತಿತಗೊಳಿಸಿ ಸತ್ಯೆ ಅನ್ವೇಷಣೆ ಮತ್ತು ಮನುಷ್ಯನ ಅಂತರಂಗದಲ್ಲಿಯ ಪರಮಾತ್ಮನ ದರ್ಶನದಂಥ ಕ್ರಾಂತಿಕಾರಕ ಜ್ಞಾನ ಆಧಾರಿತ ಪ್ರಗತಿಪರ ಸಮಾಜ ರಚನೆಯ ಆದ್ಯ ಪುರುಷರಾದಂಥ ಜಗಜ್ಯೋತಿ ಮಹಾತ್ಮ ಬಸವಣ್ಣನವರ 886ನೇ ಜಯಂತ್ಯುತ್ಸವ ಏಪ್ರಿಲ್ 26 ರಂದು ಒದಗಿ ಬಂದಿದೆ. ನಾವೆಲ್ಲರೂ ಶ್ರದ್ಧೆಯಿಂದ ತಮ್ಮ ತಮ್ಮ ಮನೆಗಳಲ್ಲಿಯೇ ಆಚರಿಸಲಿದ್ದೇವೆ. ಆ ಪವಿತ್ರ ದಿನದಂದು ಇಡೀ ಜಗತ್ತಿಗೆ ಆವರಿಸಿರುವ ಕೋವಿಡ್-19 ಮಹಾಮಾರಿ ರೋಗ ಬೇಗ ದೂರವಾಗಲಿ, ಎಲ್ಲರ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿ, ಆರೋಗ್ಯ ತುಂಬಲೆಂದು ಧರ್ಮಗುರು ಬಸವಣ್ಣನವರಲ್ಲಿ ಪ್ರಾರ್ಥಿಸೋಣ.

–ಅಕ್ಕ ಗಂಗಾಂಬಿಕೆ, ಅಂತರರಾಷ್ಟ್ರೀಯ ಲಿಂಗಾಯತ ಧರ್ಮಕೇಂದ್ರ, ಬಸವಕಲ್ಯಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT