ಸೊಳ್ಳೆ ಔಷಧ ಕುಡಿದು ಸಾವು

7

ಸೊಳ್ಳೆ ಔಷಧ ಕುಡಿದು ಸಾವು

Published:
Updated:

ಬೀದರ್: ದಮ್ಮು ನಿವಾರಕ ಔಷಧ ಎಂದು ಭಾವಿಸಿ ಸೊಳ್ಳೆ ಓಡಿಸುವ ಔಷಧ ಕುಡಿದು ಇಲ್ಲಿಯ ಮೈಲೂರಿನ ಗಾಂಧಿನಗರದ ಜಲಾಲೊದ್ದಿನ್ ಶನಿವಾರ ಮೃತಪಟ್ಟಿದ್ದಾರೆ.

ಜಲಾಲೊದ್ದಿನ್ ಅವರು 9 ವರ್ಷಗಳಿಂದ ಧಮ್ಮಿನಿಂದ ಬಳಲುತ್ತಿದ್ದರು. ಬೆಳಿಗ್ಗೆ ತಂಪು ವಾತಾವರಣ ಇದ್ದ ಕಾರಣ ಅವರಿಗೆ ದಮ್ಮು ಜಾಸ್ತಿ ಆಗಿತ್ತು. ದಮ್ಮು ಔಷಧ ಇದ್ದ ಸ್ಥಳದಲ್ಲಿನ ಸೊಳ್ಳೆ ಔಷಧ (ಆಲೌಟ್)ವನ್ನೇ ದಮ್ಮು ಔಷಧ ಎಂದು ತಿಳಿದು ಸೇವಿಸಿದ್ದಾರೆ. ಕೂಡಲೇ ಅವರನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಮೃತರ ಪುತ್ರ ಖಲೀಲ್ ಗಾಂಧಿಗಂಜ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !