ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಣಿಕೇಶ್ವರಿ ಕಾಲೇಜು; ಸಾಧಕರಿಗೆ ಸನ್ಮಾನ

Last Updated 23 ಜೂನ್ 2022, 13:56 IST
ಅಕ್ಷರ ಗಾತ್ರ

ಬೀದರ್: ಇಲ್ಲಿಯ ನ್ಯೂ ಆದರ್ಶ ಕಾಲೊನಿಯ ಏರ್‍ಪೋರ್ಟ್ ರಸ್ತೆಯಲ್ಲಿ ಇರುವ ಶ್ರೀ ಮಾತೆ ಮಾಣಿಕೇಶ್ವರಿ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಪ್ರೋತ್ಸಾಹಿಸಲಾಯಿತು.

ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ಶ್ರಾವಣಿ ದೀಪಕ್ ಜೋಶಿ (ಶೇ 96), ಶ್ರೇಯಾ ಪ್ರಕಾಶ್ ( ಶೇ 95.33), ಅಂಜಲಿ ಚೆನ್ನಾಳೆ (94.83), ದಿನೇಶ್ ಕಿಶನ್ (ಶೇ 94.83), ಪ್ರೇಕ್ಷಾ ಪ್ರಕಾಶ್ (ಶೇ 94.5), ದರ್ಶನ ಬಸವರಾಜ ತಗಾರೆ (ಶೇ 94.33), ವೆಂಕಟೇಶ ಮಾರುತಿರಾವ್ ಬಿರಾದಾರ (ಶೇ 93.67), ಎಸ್.ಕೆ. ಅಕ್ಷಯಕುಮಾರ ಎಸ್.ಕೆ. ಸಂಜೀವಕುಮಾರ (ಶೇ 93.5), ಸ್ನೇಹಾ ರಾಜಕುಮಾರ (ಶೇ 92.67), ಚಂದ್ರಿಕಾ ಶರಣಪ್ಪ (ಶೇ 91.83), ಸುದರ್ಶನ್ ಸಂತೋಷ (ಶೇ 91.83), ವಿನಾಯಕ ವಿಷ್ಣುಕಾಂತ ಶೇಂದ್ರೆ (ಶೇ 91.5), ಪುರುಷೋತ್ತಮ ಜೈರಾಜ (ಶೇ 91), ರೇಣುಕಾ ಭೀಮರಾವ್ (ಶೇ 90.5), ಸೂರಜ್ ರತನದೀಪ್ (ಶೇ 90.33), ಶಿವಾನಿ ಶಿವಕುಮಾರ (ಶೇ 90.17), ವೈಷ್ಣವಿ ವಿಠ್ಠಲರಾವ್ ಪಾಂಚಾಳ (ಶೇ 90) ಅವರಿಗೆ ಹೂಗುಚ್ಛ ನೀಡಿ, ಶಾಲು ಹೊದಿಸಿ ಗೌರವಿಸಲಾಯಿತು.

ಗುಣಮಟ್ಟದ ಶಿಕ್ಷಣ, ನುರಿತ, ಅನುಭವಿ ಉಪನ್ಯಾಸಕರ ಮಾರ್ಗದರ್ಶನ ಹಾಗೂ ವಿದ್ಯಾರ್ಥಿಗಳ ಕಠಿಣ ಪರಿಶ್ರಮದಿಂದಾಗಿ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಾಲೇಜಿಗೆ ಉತ್ತಮ ಫಲಿತಾಂಶ ಬಂದಿದೆ. 44 ವಿದ್ಯಾರ್ಥಿಗಳು ಅಗ್ರಶ್ರೇಣಿ, 176 ಪ್ರಥಮ ದರ್ಜೆ ಹಾಗೂ 25 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಕಾಲೇಜಿನ ನಿರ್ದೇಶಕ ಎಸ್.ಶ್ರೀಧರ ಹೇಳಿದರು.

ಕೆಸಿಇಟಿ ಹಾಗೂ ನೀಟ್‍ನಲ್ಲೂ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಲಿದ್ದಾರೆ ಎಂದು ನಿರ್ದೇಶಕ ಎಸ್. ರಘುನಂದನ್ ವಿಶ್ವಾಸ ವ್ಯಕ್ತಪಡಿಸಿದರು.

ಕಾಲೇಜಿನ ಪ್ರಾಚಾರ್ಯ ಲೋಕೇಶ ಉಡಬಾಳೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯ ಶೇಖರ ರೆಡ್ಡಿ, ಉಪ ಪ್ರಾಚಾರ್ಯ ಜ್ಞಾನೇಶ್ವರ ಕನಸೆ, ಹಿರಿಯ ಉಪನ್ಯಾಸಕ ಸುರೇಶ ಕುಲಕರ್ಣಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT