ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಬಹುತೇಕ ತರಕಾರಿಗಳ ಬೆಲೆ ಸ್ಥಿರ

ಮಾರುಕಟ್ಟೆಯಲ್ಲಿ ಏರಿದ ನುಗ್ಗೆಕಾಯಿ, ಬೆಂಡೆಕಾಯಿ
Last Updated 3 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ಬೀದರ್: ಶಿವರಾತ್ರಿಯವರೆಗೆ ಯಾವ ಹಬ್ಬ ಹರಿದಿನಗಳು ಇಲ್ಲ. ಹೀಗಾಗಿ ಬಹುತೇಕ ತರಕಾರಿಗಳ ಬೆಲೆ ಸ್ಥಿರವಾಗಿದೆ. ಕೆಲ ತರಕಾರಿಗಳು ಗ್ರಾಹಕರ ಕೈಗೆಟಕುವ ಬೆಲೆಯಲ್ಲೇ ಇವೆ.

ಚಳಿಗಾಲದ ಉತ್ತರಾರ್ಧದಲ್ಲಿ ನುಗ್ಗೆಕಾಯಿ ಬೆಲೆಯ ಅಟ್ಟ ಏರಿದೆ. ಬೇಸಿಗೆ ಮೊದಲೇ ಇನ್ನಷು ಕಾವು ತೋರಿಸುವ ತವಕದಲ್ಲಿದೆ. ಬೆಂಡೆಕಾಯಿ ಹಾಗೂ ಕರಿಬೇವು ಬೆಲೆ ಕೇಳಿ ಗ್ರಾಹಕರು ಹುಬ್ಬೇರಿಸುವಂತಾಗಿದೆ. ತರಕಾರಿ ರಾಜ ಬದನೆಕಾಯಿ ಆರಕ್ಕೆ ಏರದ, ಮೂರಕ್ಕೆ ಇಳಿಯದ ಸ್ಥಿತಿಯಲ್ಲಿ ಪ್ರತಿ ಕೆ.ಜಿಗೆ ₹ 80ರಂತೆ ಮಾರಾಟವಾಗುತ್ತಿದೆ.

ಪ್ರತಿ ಕ್ವಿಂಟಲ್‌ಗೆ ಮೆಂತೆ ಸೊಪ್ಪು ಬೆಲೆ ₹ 3 ಸಾವಿರ, ನುಗ್ಗೆಕಾಯಿ ₹ 2 ಸಾವಿರ ಹೆಚ್ಚಾಗಿದೆ. ಆಲೂಗಡ್ಡೆ, ಮೆಣಸಿನಕಾಯಿ, ಟೊಮೆಟೊ, ಬದನೆಕಾಯಿ. ಬೆಂಡೆಕಾಯಿ, ಡೊಣಮೆಣಸಿನಕಾಯಿ, ಚವಳೆಕಾಯಿ, ಸೌತೆಕಾಯಿ, ತುಪ್ಪದ ಹಿರೇಕಾಯಿ, ಎಲೆಕೋಸು, ಕೊತಂಬರಿ, ಪಾಲಕ್ ಹಾಗೂ ಕರಿಬೇವು ಬೆಲೆ ಸ್ಥಿರವಾಗಿದೆ.

ಪ್ರತಿ ಕ್ವಿಂಟಲ್‌ಗೆ ಸಬ್ಬಸಗಿ, ಬೀನ್ಸ್ ಬೆಲೆ ₹ 3 ಸಾವಿರ, ಹಿರೇಕಾಯಿ, ಗಜ್ಜರಿ ₹ 2 ಸಾವಿರ, ಈರುಳ್ಳಿ, ಬೆಳ್ಳುಳ್ಳಿ, ಹೂಕೋಸು ₹ 1 ಸಾವಿರ ಕಡಿಮೆಯಾಗಿದೆ.

‘ಭಾಲ್ಕಿ, ಚಿಟಗುಪ್ಪ ಹಾಗೂ ಬೀದರ್‌ ಗ್ರಾಮಾಂತರ ಪ್ರದೇಶದಿಂದ ಬದನೆಕಾಯಿ, ಎಲೆಕೋಸು ಹಾಗೂ ಹೂಕೋಸು ನಗರದ ತರಕಾರಿ ಸಗಟು ಮಾರುಕಟ್ಟೆಗೆ ಬಂದಿದೆ’ ಎಂದು ತರಕಾರಿ ವ್ಯಾಪಾರಿ ಶಿವಕುಮಾರ ಮಾಡಗೂಳ ಹೇಳುತ್ತಾರೆ.

ಹೈದರಾಬಾದ್‌ನಿಂದ ಗಜ್ಜರಿ, ಚವಳೆಕಾಯಿ, ನುಗ್ಗೆಕಾಯಿ, ಡೊಣ ಮೆಣಸಿನಕಾಯಿ, ತೊಂಡೆಕಾಯಿ, ಬೀನ್ಸ್, ಬೀಟ್‌ರೂಟ್‌, ಪಡವಲಕಾಯಿ, ಹಾಗಲಕಾಯಿ, ಬೆಳಗಾವಿಯಿಂದ ಹಸಿ ಮೆಣಸಿನಕಾಯಿ ಹಾಗೂ ಕೊತಂಬರಿ ಬಂದಿದೆ. ಸೋಲಾಪುರ ಜಿಲ್ಲೆಯಿಂದ ಈರುಳ್ಳಿ, ಬೆಳ್ಳುಳ್ಳಿ ಹಾಗೂ ಹಸಿ ಶುಂಠಿ ಆವಕವಾಗಿದೆ.

.........................................................

ಬೀದರ್‌ ತರಕಾರಿ ಚಿಲ್ಲರೆ ಮಾರುಕಟ್ಟೆ
............................................................
ತರಕಾರಿ (ಪ್ರತಿ ಕೆ.ಜಿ.) ಕಳೆದ ವಾರ, ಈ ವಾರ

....................................................
ಈರುಳ್ಳಿ 40-50, 30-40
ಬೆಳ್ಳುಳ್ಳಿ 30-40, 20-30
ಆಲೂಗಡ್ಡೆ 20-30, 20-30
ಮೆಣಸಿನಕಾಯಿ 50-60, 50-60
ಎಲೆಕೋಸು 20-30, 20-30
ಹೂಕೋಸು 50-60, 40-50
ಗಜ್ಜರಿ 50-60, 30-40
ಬೀನ್ಸ್ 70-80, 40-50
ಟೊಮೆಟೊ 5-10, 5-10

ಬದನೆಕಾಯಿ 60-80, 60-80
ಬೆಂಡೆಕಾಯಿ 100-120, 100-120
ಹಿರೇಕಾಯಿ 60-80, 50-60
ನುಗ್ಗೆಕಾಯಿ 100-120, 120-140

ಡೊಣಮೆಣಸಿನ ಕಾಯಿ 40-50,40-50
ಚವಳೆಕಾಯಿ 50-60, 50-60
ಸೌತೆಕಾಯಿ 20-30,20-30
ತುಪ್ಪದ ಹಿರೇಕಾಯಿ 50-60,40-50

ಮೆಂತೆ 20-30,50-60
ಸಬ್ಬಸಗಿ 60-80,40-50
ಕರಿಬೇವು 100-120,100-120
ಕೊತಂಬರಿ 20-30,20-30
ಪಾಲಕ್ 30-40,30-40

* * * *

ಪೇಟೆ ಧಾರಣಿ
(ಪ್ರತಿ ಕ್ವಿಂಟಲ್‌– ಕನಿಷ್ಠ– ಗರಿಷ್ಠ)
.............................................
ಕಡಲೆ ಕಾಳು – ₹ 8,000- ₹ 8,650
ಅವರೆಕಾಯಿ - ₹ 3,810- ₹ 4,785
ಜೋಳ ₹ 3,000- ₹ 5,000
ನುಚ್ಚು ಅಕ್ಕಿ ₹ 2,400- ₹ 2,800

ಅಕ್ಕಿ ₹ 4,400- ₹6,600
ಸೋಯಾಬಿನ್ ₹ 4,900- ₹ 5,300
ಗೋಧಿ ₹ 2,000- ₹ 3200

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT