ರೈತ ಅನುವುಗಾರರ ಸೇವೆ ಮುಂದುವರಿಸಿ

7

ರೈತ ಅನುವುಗಾರರ ಸೇವೆ ಮುಂದುವರಿಸಿ

Published:
Updated:
Deccan Herald

ಬೀದರ್: ರೈತ ಅನುವುಗಾರರ ಸೇವೆ ಮುಂದುವರಿಸಬೇಕು ಎಂದು ಜಿಲ್ಲಾ ರೈತ ಅನುವುಗಾರರ ಸಂಘ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಉಪಾಧ್ಯಕ್ಷ ಸಂಜುಕುಮಾರ ಬೆಣ್ಣೆ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪುರ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.

ರಾಜ್ಯದಲ್ಲಿ ಪ್ರತಿ ಪಂಚಾಯಿತಿಗೆ ಒಬ್ಬರು ರೈತ ಅನುವುಗಾರರು ಇದ್ದಾರೆ. ಭೂಚೇತನ ಯೋಜನೆ, ಮಣ್ಣು ಮಾದರಿ ಪರೀಕ್ಷೆ, ಮಣ್ಣು ಕಾರ್ಡ್ ಸೇರಿದಂತೆ ಕೃಷಿ ಇಲಾಖೆಯ ವಿವಿಧ ಯೋಜನೆಗಳ ಬಗೆಗೆ ರೈತರಿಗೆ ಮಾಹಿತಿ ಒದಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ರೈತ ಅನುವುಗಾರರ ನೇಮಕಾತಿಗಿಂತ ಮುಂಚೆ ರಾಜ್ಯದಲ್ಲಿ ಕೇವಲ 11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುತ್ತಿತ್ತು. ಇದೀಗ 52 ಲಕ್ಷ ಹೆಕ್ಟೇರ್‌ಗಿಂತ ಅಧಿಕ ಪ್ರದೇಶದಲ್ಲಿ ಬಿತ್ತನೆಯಾಗುತ್ತಿದೆ. ಇಳುವರಿಯೂ ಶೇ 20 ರಷ್ಟು ಹೆಚ್ಚಾಗಿದೆ ಎಂದು ಹೇಳಿದರು.
ವರ್ಷದಲ್ಲಿ ಆರು ತಿಂಗಳು ಮಾತ್ರ ಸೇವೆ ಪಡೆಯಲಾಗುತ್ತಿದೆ. ಗೌರವಧನವೂ ತೀರಾ ಕಡಿಮೆ ಇದೆ. ಹೀಗಾಗಿ ರೈತ ಅನುವುಗಾರರು ಸಮಸ್ಯೆ ಎದುರಿಸುವಂತಾಗಿದೆ ಎಂದು ತಿಳಿಸಿದರು.

ಅನುವುಗಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಂಗಳೂರು, ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ರೈತ ಅನುವುಗಾರರನ್ನೇ ಸೇವೆಯಿಂದ ತೆಗೆದು ಹಾಕುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.

ರೈತ ಅನುವುಗಾರರ ಸೇವೆಯನ್ನು ಯಥವತ್ತಾಗಿ ಮುಂದುವರಿಸಬೇಕು. ವರ್ಷಪೂರ್ತಿ ಕೆಲಸ ಕೊಡಬೇಕು. ಕನಿಷ್ಠ ವೇತನ ನಿಗದಿಪಡಿಸಿ ಸೇವಾ ಭದ್ರತೆ ಒದಗಿಸಬೇಕು. ದಿನಗೂಲಿ ನೌಕರರನ್ನಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಸಂಘದ ವೀರಶೆಟ್ಟಿ ಸೂಗುರ, ಅವಿನಾಶ ಮಂದಕನಳ್ಳಿ, ಸಂಜುಕುಮಾರ ಲಕ್ಕಾ, ಶಿವಾನಂದ ಬಿಚಕುಂದೆ, ಪ್ರದೀಪ ಹೂಗಾರ, ಬಾಬುರಾವ್ ಮುಸ್ತಾಪುರ, ವೀರಶೆಟ್ಟಿ ಭೂರೆ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !