‘ಗಣಿ ಇಲಾಖೆಯ ಅಧಿಕಾರಿಗಳು ಗಣಿಗಾರಿಕೆ ನಿಲ್ಲಿಸಿದ್ದಾರೆ. ಕಲ್ಲು ಗಣಿಗಾರಿಕೆಯಿಂದ ನಿರ್ಮಾಣಗೊಂಡಿದ್ದ ಕಂದಕಗಳನ್ನು ಜೆಸಿಬಿ ಸಹಾಯದಿಂದ ಮಣ್ಣು ಹಾಕಿ ಸಮತಟ್ಟುಗೊಳಿಸಲಾಗಿದೆ’ ಎಂದು ಡಿಎಫ್‌ಒ ವಾನತಿ ಎಂ.ಎಂ. ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ಜಿಂಕೆ, ಕೃಷ್ಣಮೃಗ ಆವಾಸ ಸ್ಥಾನದಲ್ಲಿ ಗಣಿಗಾರಿಕೆ’ ಶೀರ್ಷಿಕೆ ಅಡಿ ‘ಪ್ರಜಾವಾಣಿ’ ಬುಧವಾರ (ಸೆ. 25) ವರದಿ ಪ್ರಕಟಿಸಿತ್ತು. ವರದಿ ಬೆನ್ನಲ್ಲೇ ಅರಣ್ಯ ಇಲಾಖೆ ಹಾಗೂ ಗಣಿ ಇಲಾಖೆ ಕ್ರಮ ಕೈಗೊಂಡಿವೆ.
ಬೆಳ್ಳೂರು ಗ್ರಾಮವು ಚಿಟ್ಟಾ ಮೀಸಲು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಇಲ್ಲಿ ಹೆಚ್ಚಿನ ಸಂಖ್ಯೆಯ ಜಿಂಕೆ, ಕೃಷ್ಣಮೃಗಗಳಿವೆ. ಕೆಂಪು ಕಲ್ಲು ಗಣಿಗಾರಿಕೆಯಿಂದ ಅವುಗಳ ಚಲನವಲನದ ಮೇಲೆ ಪರಿಣಾಮ ಬೀರಿತ್ತು. ಆವಾಸಸ್ಥಾನ ನಾಶವಾಗುವ ಆತಂಕ ಮೂಡಿತ್ತು. ಇದಕ್ಕೆ ಪರಿಸರ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದರು.