ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಜನೆ ಹಣ ದುರ್ಬಳಕೆ, ಕಳಪೆ ಕಾಮಗಾರಿ

ಮಾನವ ಹಕ್ಕುಗಳ ರಕ್ಷಣೆ, ಭ್ರಷ್ಟಾಚಾರ ನಿರ್ಮೂಲನೆ ಸೇವಾ ಸಮಿತಿ ಪ್ರತಿಭಟನೆ
Last Updated 6 ಜುಲೈ 2022, 15:19 IST
ಅಕ್ಷರ ಗಾತ್ರ

ಬೀದರ್: ತಾಲ್ಲೂಕಿನ ರೇಕುಳಗಿ ರೇಕುಳಗಿ, ಸಿಂಧೋಲ್ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಪರಿಶಿಷ್ಟರ ಓಣಿಗಳಲ್ಲಿ ಕಳೆದ ಮಾರ್ಚ್‌ನಲ್ಲಿ ಟಿಎಸ್‌ಪಿ ಯೋಜನೆ ಅಡಿ ₹ 10 ಲಕ್ಷ ವೆಚ್ಚದಲ್ಲಿ ಕೈಗೊಂಡಿರುವ ಕಾಮಗಾರಿ ಕಳಪೆ ಮಟ್ಟದ್ದಾಗಿದೆ. ಕೆಲ ಕಡೆ ಬೇರೆ ಓಣಿಗಳಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಆರೋಪಿಸಿ ಮಾನವ ಹಕ್ಕುಗಳ ರಕ್ಷಣೆ, ಭ್ರಷ್ಟಾಚಾರ ನಿರ್ಮೂಲನೆ ಸೇವಾ ಸಮಿತಿ ಸದಸ್ಯರು ಇಲ್ಲಿಯ ಲೋಕೋಪಯೋಗಿ ಇಲಾಖೆ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಸಮಿತಿ ರಚಿಸಿ ಕಾಮಗಾರಿಯ ಗುಣಮಟ್ಟ ಪರಿಶೀಲಿಸಬೇಕು. ಕಳಪೆ ಕಾಮಗಾರಿ ಕೈಗೊಂಡಿರುವ ಹಾಗೂ ಯೋಜನೆ ಹಣ ದುರ್ಬಳಕೆ ಮಾಡಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಖಂಡೆಪ್ಪ ಪಾತರಪಳ್ಳಿ, ಉಪಾಧ್ಯಕ್ಷ ಸುನೀಲ ಪವಾರ, ಕಾರ್ಯದರ್ಶಿ ರಮೇಶ ಚವಾಣ್, ನರಸಿಂಗ್ ಸಾಮ್ರಾಟ, ಲಕ್ಷ್ಮಣ ಕಾಂಬಳೆ, ಜೈಭೀಮ ಶರ್ಮಾ, ವಿಜಯಕುಮಾರ ಭಂಗೂರೆ, ಮಹಮ್ಮದ್ ಸಿರಾಜೊದ್ದಿನ್, ಸುಧಾಕರ ಮಾಳಗೆ, ವಿಶ್ವನಾಥ ಭಂಗೂರೆ, ಜಗದೀಶ ಜಾಧವ, ಅನಿಲ ಹಲಗರ, ಮಹಮ್ಮದ್ ಆಯುತುಲ್ಲಾ, ಪಂಡಿತ ಭಂಗೂರೆ, ಪ್ರದೀಪ ಕಾಶೆಂಪೂರ, ಮೋಹನ್ ಸಾಗರ, ಆಕಾಶ ಸಾಗರ, ನಾಗಪ್ಪ ರಾಯಗೊಂಡ, ರಘುನಾಥ, ವಿಜಯ ಸಾಮ್ರಾಟ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT