ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಬಡಜನರ ಆರ್ಥಿಕ ಪ್ರಗತಿ ಸಹಕಾರಿ ಸಂಘದ ಧ್ಯೇಯ’

Published : 26 ಸೆಪ್ಟೆಂಬರ್ 2024, 15:49 IST
Last Updated : 26 ಸೆಪ್ಟೆಂಬರ್ 2024, 15:49 IST
ಫಾಲೋ ಮಾಡಿ
Comments

ಭಾಲ್ಕಿ: ‘ಬಡಜನರು, ಸಣ್ಣ ವರ್ಗದ ವ್ಯಾಪಾರಸ್ಥರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡುವುದು ಬಸವೇಶ್ವರ ಪತ್ತಿನ ಸಹಕಾರ ಸಂಘದ ಮೂಲ ಧ್ಯೇಯವಾಗಿದೆ. ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇವೆ ಎಂದು ಸಂಘದ ಅಧ್ಯಕ್ಷ ಶಶಿಧರ ಕೋಸಂಬೆ ಹೇಳಿದರು.

ಪಟ್ಟಣದ ಬಸವೇಶ್ವರ ಪತ್ತಿನ ಸಹಕಾರ ಸಂಘದಲ್ಲಿ ಆಯೋಜಿಸಿದ್ದ ಮೂರನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘವೂ ಪ್ರಸಕ್ತ ಸಾಲಿನಲ್ಲಿ ಸುಮಾರು ₹2 ಕೋಟಿ ವಾರ್ಷಿಕ ವಹಿವಾಟು ನಡೆಸುವುದರ ಜತೆಗೆ ₹2.27 ಲಕ್ಷ ರೂ ಲಾಭ ಗಳಿಸುವ ಮೂಲಕ ಪ್ರಗತಿಯತ್ತ ದಾಪುಗಾಲು ಇಟ್ಟಿದೆ. ಬಡವರು, ಸಣ್ಣಪುಟ್ಟ ವ್ಯಾಪಾರಸ್ಥರನ್ನು ಗುರುತಿಸಿ ಸಾಲ ನೀಡಲಾಗುತ್ತಿದೆ. ಎಲ್ಲರ ಸಹಕಾರದಿಂದ ಸಂಘ ಬೆಳವಣಿಗೆ ಸಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಇದೇ ವೇಳೆ ಸಂಘದ ಉತ್ತಮ ಗ್ರಾಹಕರಾದ ಪಂಡರಿನಾಥ ಪವಾರ, ಸಂತೋಷ ಪತಂಗೆ, ಪ್ರಕಾಶ ಕುಂಬಾರ, ಬಾಲಾಜಿ ಹುಲಸೂರೆ, ಬಾಬುರಾವ ಮಡಿವಾಳ ಮತ್ತು ಸಂಗಮೇಶ ರವೀಂದ್ರ ಅವರನ್ನು ಸನ್ಮಾನಿಸಲಾಯಿತು.

ನಿರ್ದೇಶಕ ಪ್ರಭು ಡಿಗ್ಗೆ ವಾರ್ಷಿಕ ವರದಿ ಮಂಡಿಸಿದರು. ಸಂಘದ ಉಪಾಧ್ಯಕ್ಷ ಸಂಗಮೇಶ ಹುಣಜೆ ಮದಕಟ್ಟಿ, ನಿರ್ದೇಶಕರಾದ ರವೀಂದ್ರ ಚಿಡಗುಪ್ಪೆ, ರಾಜಕುಮಾರ ಬಿರಾದಾರ, ಧನರಾಜ ತೇಗಂಪೂರೆ, ಸಂಗಮೇಶ ಗುಮ್ಮೆ, ಅಹ್ಮದ್ ಚಾಂದಸಾಬ್, ಲೋಹಿತ ಉತ್ಕಾರ, ಸಹದೇವ ಮಡಿವಾಳ, ಡಿಗಂಬರ ಹಡಪದ ಸಿಬ್ಬಂದಿ ಶಿವಾನಂದ ಮೇತ್ರೆ, ಸಪ್ನಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT