ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುತೇಕ ತರಕಾರಿ ಬೆಲೆ ಸ್ಥಿರ: ಇಳಿದ ನು‌ಗ್ಗೆಕಾಯಿ, ಹಿರಿಹಿರಿ ಹಿಗ್ಗಿದ ಹಿರೇಕಾಯಿ

Last Updated 28 ಮೇ 2022, 19:31 IST
ಅಕ್ಷರ ಗಾತ್ರ

ಬೀದರ್: ಮದುವೆ ಸಮಾರಂಭಗಳು ಹಾಗೂ ಜಾತ್ರೆಗಳು ಬಹುತೇಕ ಕಡಿಮೆಯಾಗಿವೆ. ಮುಂದಿನ ವಾರ ಮುಂಗಾರು ಪ್ರವೇಶ ಮಾಡಲಿರುವ ಕಾರಣ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಸಹಜವಾಗಿಯೇ ಬಹುತೇಕ ತರಕಾರಿಗಳ ಬೆಲೆ ಸ್ಥಿರವಾಗಿದೆ.

ಹಿರೇಕಾಯಿ ಮಾರುಕಟ್ಟೆಯಲ್ಲಿ ಕೊಂಚ ಬೆಲೆ ಹೆಚ್ಚಿಸಿಕೊಂಡು ಹಿರಿಹಿರಿ ಹಿಗ್ಗಿದರೆ, ಕೊಂಬಿನ ತರಕಾರಿಗಳು ಬೆಲೆ ಏರಿಸಿಕೊಳ್ಳುವ ಉಸಾಬರಿಗೆ ಹೋಗಿಲ್ಲ. ತರಕಾರಿ ರಾಜ ಬದನೆಕಾಯಿ ಸಹ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದಾನೆ.

ಹಿರೇಕಾಯಿ, ಟೊಮೆಟೊ, ಗಜ್ಜರಿ ಹಾಗೂ ಮೆಂತೆ ಸೊಪ್ಪು ಬೆಲೆ ಪ್ರತಿ ಕ್ವಿಂಟಲ್‌ಗೆ ₹ 2 ಸಾವಿರ ಹೆಚ್ಚಾಗಿದೆ.

ಬೆಳ್ಳುಳ್ಳಿ ಪ್ರತಿ ಕ್ವಿಂಟಲ್‌ಗೆ ಒಂದು ಸಾವಿರ ರೂಪಾಯಿ ಕಡಿಮೆಯಾಗಿದೆ. ನುಗ್ಗೆಕಾಯಿ ₹ 4 ಸಾವಿರ ಹಾಗೂ ಕೊತಂಬರಿ ₹ 3 ಸಾವಿರ ಇಳಿಕೆಯಾಗಿದೆ.

ಈರುಳ್ಳಿ, ಮೆಣಸಿನಕಾಯಿ, ಆಲೂಗಡ್ಡೆ, ಎಲೆಕೋಸು, ಬೀನ್ಸ್‌, ಬದನೆಕಾಯಿ, ಬೆಂಡೆಕಾಯಿ, ಚವಳೆಕಾಯಿ, ತೊಂಡೆಕಾಯಿ, ಹೂಕೋಸು, ಸಬ್ಬಸಗಿ, ಬೀಟ್‌ರೂಟ್‌, ಕರಿಬೇವು, ಪಾಲಕ್‌, ಡೊಣ ಮೆಣಸಿನಕಾಯಿ ಬೆಲೆ ಸ್ಥಿರವಾಗಿದೆ.

ನಗರದ ಮಾರುಕಟ್ಟೆಗೆ ಬೆಳಗಾವಿಯಿಂದಲೇ ಹಸಿ ಮೆಣಸಿನಕಾಯಿ ಬಂದಿದೆ. ಮೆಣಸಿನಕಾಯಿ ಬೆಲೆ ಎರಡು ವಾರ ಸ್ಥಿರವಾಗಿರುವ ಸಾಧ್ಯತೆ ಇದೆ. ಹವಾಮಾನ ಬದಲಾವಣೆ ಆದರೆ ಮಾತ್ರ ತರಕಾರಿ ಬೆಲೆಯಲ್ಲೂ ಏರಿಳಿತ ಆಗಲಿದೆ ಎಂದು ತರಕಾರಿ ವ್ಯಾಪಾರಿ ಶಿವಕುಮಾರ ಮಾಡಗೂಳ ಹೇಳುತ್ತಾರೆ.

ಹೈದರಾಬಾದ್‌ನಿಂದ ನುಗ್ಗೆಕಾಯಿ, ಬೀಟ್‌ರೂಟ್‌, ಡೊಣ ಮೆಣಸಿನಕಾಯಿ, ಗಜ್ಜರಿ, ತೊಂಡೆಕಾಯಿ, ಚವಳೆಕಾಯಿ ಬೀದರ್‌ ತರಕಾರಿ ಸಗಟು ಮಾರುಕಟ್ಟೆಗೆ ಆವಕವಾಗಿದೆ. ಚಿಟಗುಪ್ಪ ಹಾಗೂ ಭಾಲ್ಕಿ ತಾಲ್ಲೂಕಿನಿಂದ ಬದನೆಕಾಯಿ, ಎಲೆಕೋಸು, ಹಿರೇಕಾಯಿ, ಸಬ್ಬಸಗಿ, ಕೊತಂಬರಿ ಹಾಗೂ ಕರಿಬೇವು ನಗರದ ಮಾರುಕಟ್ಟೆಗೆ ಬಂದಿದೆ.

........................................................................

ತರಕಾರಿ ಮಾರುಕಟ್ಟೆ ಬೆಲೆ
......................................................................

ಈರುಳ್ಳಿ 5-10, 5-10
ಮೆಣಸಿನಕಾಯಿ 50-60, 50-60
ಆಲೂಗಡ್ಡೆ 20-30, 20-30
ಎಲೆಕೋಸು 30-40, 30-40
ಬೆಳ್ಳುಳ್ಳಿ 40-50, 30-40
ಗಜ್ಜರಿ 50-60, 60-80
ಬೀನ್ಸ್‌ 100-120,100-120
ಬದನೆಕಾಯಿ 20-30, 20-30
ಮೆಂತೆ ಸೊಪ್ಪು 60-80, 80-100
ಹೂಕೋಸು 60-80, 60-80
ಸಬ್ಬಸಗಿ 50-60, 50-60
ಬೀಟ್‌ರೂಟ್‌ 30-40, 30-40
ತೊಂಡೆಕಾಯಿ 50-60, 50-60
ಕರಿಬೇವು 20-30, 20-30
ಕೊತಂಬರಿ 60-80, 40-50
ಟೊಮೆಟೊ 80-100,100-120
ಪಾಲಕ್‌ 30-40, 30-40
ಬೆಂಡೆಕಾಯಿ 30-40, 30-40
ಹಿರೇಕಾಯಿ 30-40, 50-60
ನುಗ್ಗೆಕಾಯಿ 100-120,60-80
ಡೊಣ ಮೆಣಸಿನಕಾಯಿ 60-80, 60-80
ಚವಳೆಕಾಯಿ 30-40, 30-40

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT