ಮಂಗಳವಾರ, ಏಪ್ರಿಲ್ 20, 2021
24 °C

17 ಅನಧಿಕೃತ ಮೂರ್ತಿ ತೆರವು, ತಹಶೀಲ್ದಾರ್‌, ಡಿವೈಎಸ್ಪಿ ಕಾರ್ಯಕ್ಕೆ ಮೆಚ್ಚುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ: ತಾಲ್ಲೂಕಿನ ಭಾತಂಬ್ರಾ ಗ್ರಾಮದ ಮುಖ್ಯರಸ್ತೆ, ಗ್ರಾಮದಲ್ಲಿನ 12, ಆನಂದವಾಡಿ ಗ್ರಾಮದಲ್ಲಿನ 5 ಸೇರಿದಂತೆ ಒಟ್ಟು 17 ಅನಧಿಕೃತ ಮೂರ್ತಿಗಳನ್ನು ತಹಶೀಲ್ದಾರ್‌ ಅಣ್ಣಾರಾವ್‌ ಪಾಟೀಲ, ಡಿವೈಎಸ್ಪಿ ದೇವರಾಜ್‌ ಬಿ. ನೇತೃತ್ವದ ಅಧಿಕಾರಿಗಳ ತಂಡ ತೆರವುಗೊಳಿಸಿತು.

ಭಾತಂಬ್ರಾ ಗ್ರಾಮದಲ್ಲಿ ಬೋಮ್ಮಗೊಂಡೇಶ್ವರ, ಅಂಬೇಡ್ಕರ್‌, ಸುಭಾಶ ಚಂದ್ ರಬೋಸ್‌ ವೃತ್ತ, ಗಣೇಶ, ಪೀರ್‌ ಕಟ್ಟೆ, ಶಿವಾಜಿ ವೃತ್ತ, ಬಸವೇಶ್ವರ ಮೂರ್ತಿ, ಅಗ್ಗಿ ಬಸವಣ್ಣ, ಕ್ರಿಶ್ಚಿಯನ್‌, ಅಂಬೇಡ್ಕರ್‌ ವೃತ್ತ-2, ಕ್ರಿಶ್ಚಿಯನ್‌ ವೃತ್ತ-2, ಡೋಹರ ಕಕ್ಕಯ್ಯ ವೃತ್ತ ಸೇರಿದಂತೆ ಒಟ್ಟು 12 ಮೂರ್ತಿಗಳನ್ನು ತೆರವುಗೊಳಿಸಿದರು. ಮೂರ್ತಿ ತೆರವಿಗೂ ಮುಂಚೆ ಎಲ್ಲ ವೃತ್ತಗಳಿಗೆ ಪೂಜೆ ಸಲ್ಲಿಸಿದರು.

ಈ ಹಿಂದೆ ಗ್ರಾಮದಲ್ಲಿ ಹೆದ್ದಾರಿ ರಸ್ತೆ ನಿರ್ಮಾಣ ಕಾಮಗಾರಿ ನಡೆದಾಗ ಮೂರ್ತಿಗಳನ್ನು ತೆರವುಗೊಳಿಸುವ ಸಂಬಂಧ ಹಿರಿಯ ಅಧಿಕಾರಿಗಳು ಸಾಕಷ್ಟು ಪ್ರಯತ್ನ ಮಾಡಿದ್ದರೂ ಸಾಧ್ಯವಾಗಿರಲಿಲ್ಲ.

ಈಗ ತಹಶೀಲ್ದಾರ್‌, ಡಿವೈಎಸ್ಪಿ ಎಲ್ಲ ಸಮಾಜದ ಪ್ರಮುಖರನ್ನು, ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೂರ್ತಿ ತೆರವುಗೊಳಿಸಿರುವುದು

ಮೆಚ್ಚುಗೆಯ ಕಾರ್ಯ ಎಂದು ಗ್ರಾಮಸ್ಥರಾದ ಸಿದ್ದು, ಪ್ರವೀಣ ತಿಳಿಸಿದರು.

ಆನಂದವಾಡಿ ಗ್ರಾಮದಲ್ಲಿ ಬಸವೇಶ್ವರ, ಬೋಮ್ಮಗೊಂಡೇಶ್ವರ, ನೂಲಿಯ ಚಂದಯ್ಯ, ಸುಭಾಷಚಂದ್ರ ಬೋಸ್‌ ವೃತ್ತ ಹಾಗೂ ಗಣೇಶ ಕಟ್ಟೆಯನ್ನು ಸಹ ತೆರವುಗೊಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು