ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಭಾವೈಕ್ಯತೆ ಸಂಗೀತ ಕಾರ್ಯಕ್ರಮ

Last Updated 16 ಮಾರ್ಚ್ 2022, 15:53 IST
ಅಕ್ಷರ ಗಾತ್ರ

ಬೀದರ್: ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾನಯೋಗಿ ಪಂಚಾಕ್ಷರ ಗವಾಯಿ ಸಂಗೀತ ವಿದ್ಯಾಲಯದಲ್ಲಿ ರಾಷ್ಟ್ರೀಯ ಭಾವೈಕ್ಯತೆ ಸಂಗೀತ ಕಾರ್ಯಕ್ರಮ ನಡೆಯಿತು.

ಸಂಗೀತ ಕಲಾವಿದ ಬಸವರಾಜ ಸಾಲಿ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಮಾಡಿದರು. ಲಕ್ಷ್ಮಣರಾವ್ ಆಚಾರ್ಯ ತಬಲಾ ಸಾಥ್ ನೀಡಿದರು.

ಶಾಂಭವಿ ಪಂಚಾಕ್ಷರಿ ಕಲ್ಮಠ್, ಲಕ್ಷ್ಮಣರಾವ್ ಆಚಾರ್ಯ, ರೇಖಾ ನಿಂಗದಳ್ಳಿ, ಆರುಂಧತಿ ಪಾಟೀಲ, ಸಂಗಮೇಶ ಸ್ವಾಮಿ, ವಿಷ್ಣುಕಾಂತ ಜ್ಯೋತಿ ದೇಶಭಕ್ತಿ ಗೀತೆಗಳನ್ನು ಹಾಡಿದರು. ನಿವೃತ್ತ ಶಿಕ್ಷಕ ರೇವಣಪ್ಪ ಮೂಲಗೆ ಹಾಗೂ ಎಸ್.ವಿ. ಕಲ್ಮಠ್ ತಬಲಾ ಸಾಥ್ ನೀಡಿದರು.

ಸಾಹಿತಿ ಎಂ.ಜಿ. ದೇಶಪಾಂಡೆ ಉದ್ಘಾಟಿಸಿದರು. ಸಂಘದ ಗೌರವಾಧ್ಯಕ್ಷ ಪ್ರೊ. ದೇವೇಂದ್ರ ಕಮಲ್, ಸಾಹಿತಿ ವಿ.ಎಂ. ಡಾಕುಳಗಿ ಉಪಸ್ಥಿತರಿದ್ದರು. ಸಂಜು ಸ್ವಾಮಿ ಸ್ವಾಗತಿಸಿದರು. ವೀರಭದ್ರಪ್ಪ ಉಪ್ಪಿನ್ ನಿರೂಪಿಸಿದರು. ಡಾ.ಬಿ.ಎಸ್. ಬಿರಾದಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT