ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಠಗಳಿರುವ ಊರು ಉದ್ಧಾರ

ಪ್ರಾಂಶುಪಾಲ ಡಾ.ಬಲರಾಂ ಹುಡೆ ಅಭಿಮತ
Last Updated 19 ಮೇ 2022, 3:13 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ಮಠಗಳಿರುವ ಕಾರಣ ಜನರು ದುಶ್ಚಟ, ದುರ್ಗುಣಗಳಿಗೆ ಹೆಚ್ಚಾಗಿ ಬಲಿ ಆಗುವುದಿಲ್ಲ. ಹೀಗಾಗಿ ಅಂಥ ಊರು ಉದ್ಧಾರ ಆಗುತ್ತದೆ’ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಬಲರಾಂ ಹುಡೆ ಹೇಳಿದ್ದಾರೆ.

ಗವಿಮಠ ಸಂಸ್ಥಾನದಿಂದ ನಗರದ ಸೀತಾ ಕಾಲೊನಿಯ ಸಾಹಿತಿ ಡಾ.ಚಿತ್ರಶೇಖರ ಚಿರಳ್ಳಿ ಅವರ ನಿವಾಸದಲ್ಲಿ ಮಂಗಳವಾರ ನಡೆದ ಸದ್ಭಾವ ಚಿಂತನ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಮಠಗಳು ಸೌಹಾರ್ದ ವಾತಾವರಣ ಸೃಷ್ಟಿಸುವ ಜತೆಗೆ ಜ್ಞಾನದ ಬೆಳಕನ್ನು ಪಸರಿಸುತ್ತವೆ. ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಯತ್ನಿಸುತ್ತವೆ. ನಾಡಿನಾದ್ಯಂತ ಸಾವಿರಾರು ವರ್ಷಗಳ ಹಿಂದೆ ವೀರಶೈವ ಲಿಂಗಾಯತ ಮಠಗಳು ಈ ಕಾರಣಕ್ಕಾಗಿಯೇ ಸ್ಥಾಪಿತಗೊಂಡವು. ಗವಿಮಠ ಸಂಸ್ಥಾನದಿಂದ ಕೂಡ ಸದ್ಭಾವ ಚಿಂತನ ಆಯೋಜಿಸಿ ಸನ್ಮಾರ್ಗ ತೋರಲಾಗುತ್ತಿದೆ’ ಎಂದರು.

ನೇತೃತ್ವ ವಹಿಸಿದ್ದ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ,‘ಎಲ್ಲರೂ ಸತ್ಯ ಶುದ್ಧ ಮನಸ್ಸಿನಿಂದ ದಾಸೋಹಗೈಯಬೇಕು. ಮಾಡಿ ಮಾಡಿ ಕೆಟ್ಟರೋ ಮನವಿಲ್ಲದೆ, ನೀಡಿ ನೀಡಿ ಕೆಟ್ಟರೋ ನಿಜವಿಲ್ಲದೆ ಎನ್ನುವಂತಾಗಬಾರದ’ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ.ಚಿತ್ರಶೇಖರ ಚಿರಳ್ಳಿ, ಪ್ರೊ.ರುದ್ರೇಶ್ವರ ಗೋರಟಾ, ಶಂಕರ ಅಗರಗೆ, ಸಂಗೀತಾ ಮಹಾಗಾವೆ, ಇಂದುಮತಿ ಅಪಗುಂಡೆ ಮಾತನಾಡಿದರು.

ಶ್ರೀಮದ್ವೀರಶೈವ ಸದ್ಬೋಧನಾ ಸಂಸ್ಥೆ ತಾಲ್ಲೂಕು ಘಟಕದ ಅಧ್ಯಕ್ಷ ಬಸವಂತಪ್ಪ ಲವಾರೆ, ನಿವೃತ್ತ ಪ್ರಾಂಶುಪಾಲ ನಾಗೇಂದ್ರ ಢೋಲೆ, ಕ್ಷೇಮಲಿಂಗ ಬೆಳಮಗಿ, ಡಾ.ಶಿವಾನಂದ ಪಟವಾದಿ, ಪ್ರೊ.ಸೂರ್ಯಕಾಂತ ಶೀಲವಂತ, ಪ್ರೊ.ದಶವಂತ ಭಂಡೆ, ಅನ್ನಪೂರ್ಣಾ ಚಿರಳ್ಳಿ, ನಂದಿನಿ ಚಿರಳ್ಳಿ, ಪ್ರೊ.ಪುಷ್ಪಾ ಕೋರೆ, ಡಾ.ಶಿವಲೀಲಾ ಮಠಪತಿ, ಪೂರ್ಣಿಮಾ ರುದ್ರೇಶ್ವರ, ಸವಿತಾ ಹಾಗೂ ಸುಲೋಚನಾ ಟೊಣಪೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT