ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಅಧ್ಯಕ್ಷರಾಗಿ ನಬಿ ಖುರೇಶಿ

ಜಮಿಯತ್ ಉಲ್ ಖುರೇಶ್ ಆ್ಯಕ್ಷನ್ ಸಮಿತಿ
Last Updated 23 ಸೆಪ್ಟೆಂಬರ್ 2021, 14:55 IST
ಅಕ್ಷರ ಗಾತ್ರ

ಬೀದರ್: ಆಲ್ ಇಂಡಿಯಾ ಜಮಿಯತ್ ಉಲ್ ಖುರೇಶ್ ಆ್ಯಕ್ಷನ್ ಸಮಿತಿಯ ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿ ಬೀದರ್‍ನ ಮುಖಂಡ ನಬಿ ಖುರೇಶಿ ಅವರನ್ನು ನೇಮಕ ಮಾಡಲಾಗಿದೆ.

ಬೆಂಗಳೂರಿನಲ್ಲಿ ನಡೆದ ಆಲ್ ಇಂಡಿಯಾ ಜಮಿಯತ್ ಉಲ್ ಖುರೇಶ್ ಆ್ಯಕ್ಷನ್ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಅವರನ್ನು ನೇಮಕ ಮಾಡಲಾಯಿತು.

ನಬಿ ಖುರೇಶಿ ಬೀದರ್ ಜಿಲ್ಲೆಯ ಖುರೇಶ್ ಸಮುದಾಯದ ಪ್ರಭಾವಿ ಮುಖಂಡರಲ್ಲಿ ಒಬ್ಬರಾಗಿದ್ದಾರೆ. ಆಲ್ ಇಂಡಿಯಾ ಜಮಿಯತ್ ಉಲ್ ಖುರೇಶ್ ಆ್ಯಕ್ಷನ್ ಸಮಿತಿಯ ರಾಜ್ಯ ಘಟಕದ ವಿವಿಧ ಹುದ್ದೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಹೀಗಾಗಿ ಇದೀಗ ಅವರಿಗೆ ರಾಜ್ಯ ಅಧ್ಯಕ್ಷ ಹುದ್ದೆ ಒಲಿದಿದೆ.

ಆಲ್ ಇಂಡಿಯಾ ಜಮಿಯತ್ ಉಲ್ ಖುರೇಶ್ ಆ್ಯಕ್ಷನ್ ಸಮಿತಿಯ ಅಧ್ಯಕ್ಷ ಫಹೀಮ್ ಸಾಬ್ ಅವರ ಅಧ್ಯಕ್ಷತೆ ನಡೆದ ಸಭೆಯಲ್ಲಿ ಖುರೇಶ್ ಸಮುದಾಯದ ವಿವಿಧ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು.

ಸಮಿತಿಯ ಉತ್ತರ ಭಾರತದ ಸಂಯೋಜಕ ಸಲೀಂ ಸಾಬ್, ದಕ್ಷಿಣ ಭಾರತದ ಸಂಯೋಜಕ ಬಿ.ಎಂ. ಯುಸೂಫ್, ದೇಶದ ಎಲ್ಲ ರಾಜ್ಯಗಳು ಹಾಗೂ ಕರ್ನಾಟಕ ವಿವಿಧ ಜಿಲ್ಲೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT