ನಾಗರ ಪಂಚಮಿ: ಬುಲಾಯಿ ಹಾಡಿಗೆ ಮಹಿಳೆಯರ ಹೆಜ್ಜೆ

7
ನಾಗರ ಪಂಚಮಿ: ಹುತ್ತಕ್ಕೆ ಹಾಲು, ವಿಶೇಷ ಪೂಜೆ

ನಾಗರ ಪಂಚಮಿ: ಬುಲಾಯಿ ಹಾಡಿಗೆ ಮಹಿಳೆಯರ ಹೆಜ್ಜೆ

Published:
Updated:
Deccan Herald

ಬೀದರ್: ಮಹಿಳೆಯರ ದೊಡ್ಡ ಹಬ್ಬ ನಾಗರ ಪಂಚಮಿಯನ್ನು ನಗರದಲ್ಲಿ ಬುಧವಾರ ಸಂಭ್ರಮದಿಂದ ಆಚರಿಸಲಾಯಿತು.

ವಿದ್ಯಾನಗರ ಕಾಲೊನಿ, ರಾಂಪುರೆ ಕಾಲೊನಿ, ಗುಂಪಾ, ಜ್ಯೋತಿ ಕಾಲೊನಿ, ನಂದಿ ಕಾಲೊನಿ, ಬಸವನಗರ, ಅಕ್ಕ ಮಹಾದೇವಿ ಕಾಲೊನಿ, ಶಿವನಗರ, ಕೆಎಚ್‌ಬಿ ಕಾಲೊನಿ ಸೇರಿದಂತೆ ನಗರದ ವಿವಿಧೆಡೆ ಮಹಿಳೆಯರು ಹುತ್ತಗಳಿಗೆ ಹಾಲು ಎರೆದರು.
ಅಗರಬತ್ತಿ, ಕರ್ಪೂರ ಬೆಳಗಿಸಿ ತೆಂಗಿನ ಕಾಯಿ ಒಡೆದರು. ಹೋಳಿಗೆ, ಹುರಿದ ಜೋಳದ ಅಳ್ಳು, ಹುರಿದ ಕಡಲೆ, ಅಳ್ಳಿಟ್ಟಿನ ನೈವೇದ್ಯ ಅರ್ಪಿಸಿದರು.

ಸ್ವಾತಂತ್ರ್ಯೋತ್ಸವದ ಜತೆಗೆ ನಾಗರ ಪಂಚಮಿ ಬಂದದ್ದು ಹಬ್ಬದ ಸಂಭ್ರಮ ಇಮ್ಮಡಿಗೊಳಿಸಿತ್ತು. ನಗರದ ಮನೆ ಮನೆಗಳಲ್ಲೂ ಸಂತಸದ ವಾತಾವರಣ ನಿರ್ಮಾಣಗೊಂಡಿತು.

ಮಕ್ಕಳು, ಮಹಿಳೆಯರು, ಹಿರಿಯರು ಸಿಹಿ ಖಾದ್ಯಗಳನ್ನು ಸವಿದರು. ಮನೆಗೆ ಬಂದ ಮಹಿಳೆಯರಿಗೆ ಕುಟುಂಬದ ಹಿರಿಯರು ಬಟ್ಟೆ, ಬಳೆಯನ್ನು ಉಡುಗೊರೆಯಾಗಿ ನೀಡಿದರು.

ಮಹಿಳೆಯರು, ಮಕ್ಕಳು ಹೊಸ ಬಟ್ಟೆ, ಬಳೆ ತೊಟ್ಟು ಸಂಭ್ರಮಿಸಿದರು. ಜೋಕಾಲಿ ಆಡಿದರು. ನಗರದ ವಿವಿಧ ಬಡಾವಣೆಗಳಲ್ಲಿ ಸಂಜೆ ಮಹಿಳೆಯರು ಬುಲಾಯಿ ಹಾಕಿದರು. ಹಿರಿಯರ ಬುಲಾಯಿ ಪದಗಳಿಗೆ ಹೆಜ್ಜೆ ಹಾಕಿದರು.

ನಗರದಲ್ಲಿ ಹಬ್ಬದ ದಿನವೂ ಹೆಣ್ಣುಮಕ್ಕಳು ಬಟ್ಟೆ ಬರೆ, ಬಳೆ, ಚಪ್ಪಲಿ, ಅಲಂಕಾರಿಕ ವಸ್ತುಗಳನ್ನು ಖರೀದಿಸುತ್ತಿದ್ದುದು ಕಂಡು ಬಂದಿತು. ನಗರದ ಬಟ್ಟೆ ಅಂಗಡಿಗಳಲ್ಲಿ ಮಹಿಳೆಯರ ದಂಡು ಕಂಡು ಬಂದಿತು. ಮಹಿಳೆಯರು ತಮಗೆ ಇಷ್ಟವಾದ ಬಗೆಯ ಬಟ್ಟೆಗಳನ್ನು ಆಯ್ಕೆ ಮಾಡಿಕೊಂಡರು.

ಪಂಚಮಿ ಹಬ್ಬಕ್ಕಾಗಿಯೇ ನಗರದ ಬಹುತೇಕ ಅಂಗಡಿಯವರು ಹೊಸ ಹೊಸ ವಿನ್ಯಾಸದ ಬಟ್ಟೆಗಳನ್ನು ತಂದಿದ್ದರು. ಮಹಿಳಾ ಗ್ರಾಹಕರನ್ನು ಸೆಳೆಯಲು ನೂತನ ತಂತ್ರಗಳನ್ನು ಅನುಸರಿಸಿದರು.

ಕೆಲ ಬಟ್ಟೆ ಅಂಗಡಿಯವರು ಬಟ್ಟೆಗಳ ಮೇಲೆ ದೊಡ್ಡ ಪ್ರಮಾಣದ ರಿಯಾಯಿತಿ ಘೋಷಣೆ ಮಾಡಿದ್ದರೆ, ಇನ್ನು ಕೆಲವರು ಖರೀದಿ ಮೇಲೆ ‘ಗಿಫ್ಟ್’ ಹಾಗೂ ಕೂಪನ್‌ಗಳನ್ನು ನೀಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !