ಬುಧವಾರ, ಸೆಪ್ಟೆಂಬರ್ 29, 2021
21 °C

ನಿರ್ಣಾ: ರಸ್ತೆ ಒತ್ತುವರಿ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಟಗುಪ್ಪ: ತಾಲ್ಲೂಕಿನ ನಿರ್ಣಾದಲ್ಲಿ ಸರ್ವೆ ನಂ 223ರಲ್ಲಿ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡು ಶಿವಾರದ ರೈತರಿಗೆ ಹೊಲ ಗದ್ದೆಗಳಿಗೆ ಹೋಗುವ ರಸ್ತೆ ಮುಚ್ಚಿದ್ದ ರೈತನ ಬಗ್ಗೆ ಗ್ರಾಮಸ್ಥರಿಂದ ದೂರು ಬಂದ ಕಾರಣ ತೆರವುಗೊಳಿಸಲಾಗಿದೆ.

ನಾಡ ತಹಶೀಲ್ದಾರ್‌ ವಿಜಯ ಕುಮಾರ ಸ್ವಾಮಿ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಅತಿಕ್ರಮಣ ಮಾಡಿದ ರೈತನಿಗೆ ತಿಳಿವಳಿಕೆ ನೀಡಿ ನಂತರ ಕಂದಾಯ ಇಲಾಖೆಯ ಸಿಬ್ಬಂದಿ ಹಾಗೂ ರೈತರ ನೆರವಿನಿಂದ ರಸ್ತೆ ಒತ್ತುವರಿ ತೆರವುಗೊಳಿಸಿ ಸಂಚಾರಕ್ಕೆ ರಸ್ತೆ ಮುಕ್ತಗೊಳಿಸಿದ್ದಾರೆ.

ಸಿದ್ದಣ್ಣ ಮೈಲೂರ್‌, ಮಾಣಿಕಪ್ಪ ದರಗೊಂಡ್‌, ಘಾಳೆಪ್ಪ ದರಗೊಂಡ್‌, ಮೈಬೂಬ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.