ಸೋಮವಾರ, ಡಿಸೆಂಬರ್ 9, 2019
20 °C

ಕಲಬುರ್ಗಿಯಲ್ಲಿ ವಿಮಾನ ಇಳಿಸಿದ ಬೀದರ್‌ ಪೈಲಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ನವೆಂಬರ್‌ 22ರಂದು ಬೆಂಗಳೂರಿನಿಂದ ಕಲಬುರ್ಗಿಯಲ್ಲಿ ಸ್ಟಾರ್ ಏರ್ ವಿಮಾನ ಬಂದಿಳಿದ ನಂತರ ಬೀದರ್‌ನಲ್ಲೂ ಸಂತಸ ಮನೆ ಮಾಡಿತು. ಇದಕ್ಕೆ ಕಾರಣ ವಿಮಾನ ತಂದಿಳಿಸಿದ ಪೈಲಟ್‌ ಬೀದರ್‌ನವರು.

ಕಾಕ್‌ಪಿಟ್‌ನಲ್ಲಿ ದಿಲಬಾಗ್‌ ಸಿಂಗ್‌ ಹಾಗೂ ಬೀದರ್‌ನ ಹೃಷಿಕೇಶ ವಿಜಯಕುಮಾರ ಪಾಟೀಲ ಮೊದಲ ಬಾರಿಗೆ ಸ್ಟಾರ್ ಏರ್ ವಿಮಾನವನ್ನು ತೊಗರಿನಾಡು ಕಲಬುರ್ಗಿಯಲ್ಲಿ ಇಳಿಸಿದರು. ಮಧ್ಯಾಹ್ನ 1.45ಕ್ಕೆ ವಿಮಾನ ಸುರಕ್ಷಿತವಾಗಿ ಭೂಸ್ಪರ್ಶ ಮಾಡುತ್ತಲೇ ಸಾವಿರಾರು ಜನ ಚೆಪ್ಪಾಳಿ ತಟ್ಟಿ ಕೇಕೆ ಹಾಕಿ ಖುಷಿ ಹಂಚಿಕೊಂಡರು.

31 ವರ್ಷದ ಹೃಷಿಕೇಶ ಅವರು ಹಿರಿಯ ಪತ್ರಕರ್ತ ವಿಜಯಕುಮಾರ ಪಾಟೀಲ ಅವರ ಪುತ್ರ ಹಾಗೂ ನಿವೃತ್ತ ವಾರ್ತಾಧಿಕಾರಿ ವಿ.ಬಿ.ಪಾಟೀಲ ದಮನ್‌ ಮೊಮ್ಮಗ. ಕಲ್ಯಾಣ ಕರ್ನಾಟಕದಲ್ಲಿ ವಿಮಾನ ಹಾರಾಟಕ್ಕೆ ಅವಕಾಶ ದೊರೆತ ಬಗ್ಗೆ ಹೃಷಿಕೇಶ ಹರ್ಷ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)