ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಹೊಲದಲ್ಲಿ ಒಂದು ಸಾವಿರ ಬೋರ್‌ವೆಲ್‌

ಮರಾಠಾ ಸಮಾಜದ ಮುಖಂಡ ಸಂತೋಷ ಲಾಡ್ ಭರವಸೆ
Last Updated 29 ನವೆಂಬರ್ 2020, 15:28 IST
ಅಕ್ಷರ ಗಾತ್ರ

ಬೀದರ್: ‘ಜಿಲ್ಲೆಯ ಮರಾಠಾ ಸಮುದಾಯದ ರೈತರ ಹೊಲಗಳಲ್ಲಿ ಒಂದು ಸಾವಿರ ಬೋರ್‌ವೆಲ್‌ ಕೊರೆಸಲಾಗುವುದು’ ಎಂದು ಮರಾಠಾ ಸಮಾಜದ ಮುಖಂಡ ಸಂತೋಷ ಲಾಡ್ ಭರವಸೆ ನೀಡಿದರು.

ನಗರದ ನೌಬಾದ್‌ನಲ್ಲಿರುವ ಮರಾಠಾ ಭವನದಲ್ಲಿ ನಡೆದ ಮರಾಠ ಸಮಾಜದ ಸಭೆಯಲ್ಲಿ ಅವರು ಮಾತನಾಡಿದರು.

ಔರಾದ್, ಭಾಲ್ಕಿ ಮತ್ತು ಬಸವಕಲ್ಯಾಣ ತಾಲ್ಲೂಕಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಮರಾಠಾ ಸಮಾಜ ಸೇವಾ ಟ್ರಸ್ಟ್ ನೂತನ ಕಚೇರಿಗಳನ್ನು ಡಿಸೆಂಬರ್‌ನಲ್ಲಿ ಉದ್ಘಾಟಿಸಲಾಗುವುದು ಎಂದರು.

ಜಿಲ್ಲೆಯ ಆರು ವಿಧಾನಸಭಾ ಮತಕ್ಷೇತ್ರಗಳಲ್ಲಿ ಮರಾಠಾ ಸಮಾಜದ ಜನರ ಸಂಖ್ಯೆ ಅಧಿಕ ಇದೆ. ಯಾವುದೇ ಚುನಾವಣೆಗಳಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಮರಾಠಾ ಸಮಾಜದವರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಮರಾಠಾ ಸಮುದಾಯದವರು ಸಂಘಟಿತರಾಗಬೇಕು ಎಂದು ಮನವಿ ಮಾಡಿದರು.

ಇದಕ್ಕೂ ಮೊದಲು ಛತ್ರಪತಿ ಶಿವಾಜಿ ಮಹಾರಾಜ ಮರಾಠಾ ಸಮಾಜ ಸೇವಾ ಟ್ರಸ್ಟ್ ಬೀದರ್ ಜಿಲ್ಲಾ ಘಟಕದ ಕಚೇರಿಯನ್ನು ಉದ್ಘಾಟಿಸಿದರು.

ವಿಜಯಕುಮಾರ ಕಣಜಿಕರ್, ಮುರಳೀಧರರಾವ್ ಕಾಳೆ, ಅಂಗದ ಜಗತಾಪ, ಸಂದೀಪ ತೇಲಗಾಂವಕರ್, ಅಶೋಕ ಸೋನಜೆ, ಬನ್ಸಿಲಾಲ್ ಬೋರಳೆ, ರಘುನಾಥರಾವ್ ಜಾಧವ್, ಹಣಮಂತರಾವ್ ಚೌಹಾಣ, ಕಿರಣ ಬಿರಾದಾರ, ಗೋರಖ ಶ್ರೀಮಾಳೆ, ಸಂತೋಷ ಶೆಡೋಳೆ, ಪ್ರದೀಪ ಬಿರಾದಾರ, ಬಾಲಾಜಿ ಬಸವಕಲ್ಯಾಣ, ಹಣಮಂತರಾವ್ ಮಾನಕಾರಿ, ಬಾಲಾಜಿ ಕಣಜಿಕರ್ ವಕೀಲರು, ಗೋರಖ ವಕೀಲರು, ಬಾಲಾಜಿ ಚಂಡಕಾಪೂರೆ, ಯುವರಾಜ್ ಪಾಟೀಲ, ಜನಾರ್ಧನ ಬಿರಾದಾರ ಸೇರಿದಂತೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT