ಬುಧವಾರ, ಫೆಬ್ರವರಿ 1, 2023
18 °C

ಉಸ್ಮಾನಿಯಾ ಬಿಸ್ಕತ್ ಕಳವು: ಇಬ್ಬರು ಆರೋಪಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜನವಾಡ: ಬೀದರ್ ತಾಲ್ಲೂಕಿನ ಭಂಗೂರ ಸಮೀಪದ ಧಾಬಾ ಬಳಿ ನಿಲ್ಲಿಸಿದ್ದ ಲಾರಿಯಿಂದ ಉಸ್ಮಾನಿಯಾ ಬಿಸ್ಕತ್ ಕಾಟನ್‍ಗಳನ್ನು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಮನ್ನಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೀದರ್‍ನ ಚಿದ್ರಿಯ ಎಂ.ಡಿ. ಮುಜಾಮಿಲ್ ಬಿಸ್ಕತ್‍ವಾಲೆ ಹಾಗೂ ಜಹೀರಾಬಾದ್‍ನ ಸೈಯದ್ ಹಾಜಿ ಅಲಿ ಸೈಯದ್ ಸುಲ್ತಾನ್ ಅಲಿ ಬಂಧಿತರು. ಆರೋಪಿಗಳಿಂದ ₹ 88,920 ಮೌಲ್ಯದ 114 ಕಾಟನ್ ಬಿಸ್ಕತ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರ್ಡರ್ ನೀಡಿದವರಿಗೆ ಕೊಡುವುದಕ್ಕಾಗಿ ಬಿಸ್ಕತ್ ತುಂಬಿಕೊಂಡು ತರಲಾಗಿದ್ದ ಲಾರಿಯನ್ನು ಊಟಕ್ಕಾಗಿ ಭಂಗೂರ ಧಾಬಾ ಸಮೀಪ ನಿಲ್ಲಿಸಿ ಹೋಗಿದ್ದಾಗ ಬಿಸ್ಕತ್‍ಗಳನ್ನು ಕಳವು ಮಾಡಲಾಗಿದೆ ಎಂದು ಬಿಸ್ಕತ್ ಸೆಲ್ಸ್ ಮ್ಯಾನ್ ಮಿರ್ಜಾ ತಾಲಿಬ್ ಅಲಿ ಮಿರ್ಜಾ ಮಹಮ್ಮದ್ ಅಲಿವೊದ್ದಿನ್ ಅವರು ಮನ್ನಳ್ಳಿ ಠಾಣೆಗೆ ದೂರು ನೀಡಿದ್ದರು.

ತನಿಖೆ ಆರಂಭಿಸಿದ ಪಿಎಸ್‍ಐಗಳಾದ ಕಲ್ಲಪ್ಪ, ವೀರಶೆಟ್ಟಿ ಹಾಗೂ ಸಿಬ್ಬಂದಿಯನ್ನು ಒಳಗೊಂಡ ತಂಡವು 48 ಗಂಟೆಗಳಲ್ಲೇ ಆರೋಪಿಗಳನ್ನು ಪತ್ತೆ ಹೆಚ್ಚುವಲ್ಲಿ ಯಶಸ್ವಿಯಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.