ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್.ಬಿ.ಪಾಟೀಲ ದಂತ ವೈದ್ಯಕೀಯ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಉಡಾನ್- ಕ್ರೀಡಾ, ಸಾಂಸ್ಕೃತಿಕ ಉತ್ಸವಕ್ಕೆ ತೆರೆ
Last Updated 22 ಜನವರಿ 2019, 14:01 IST
ಅಕ್ಷರ ಗಾತ್ರ

ಬೀದರ್‌: ರೋಟರಿ ಕ್ಲಬ್‌ ಆಫ್‌ ಬೀದರ್‌ ನ್ಯೂ ಸೆಂಚುರಿ ವತಿಯಿಂದ ಆಯೋಜಿಸಿದ್ದ ಮೂರು ದಿನಗಳ ‘ಉಡಾನ್ 2019’ ಅಂತರ ಕಾಲೇಜು ಕ್ರೀಡಾ ಹಾಗೂ ಸಾಂಸ್ಕೃತಿಕ ಉತ್ಸವದ ವಿವಿಧ ಸರ್ಧೆಗಳಲ್ಲಿ ಎಸ್.ಬಿ.ಪಾಟೀಲ ಡೆಂಟಲ್‌ ಕಾಲೇಜ್ ಸಮಗ್ರ ಪ್ರಶಸ್ತಿ ಪಡೆದಿದೆ.

ಮಹಿಳೆಯರ ವಿಭಾಗದ ಟೇಬಲ್ ಟೆನಿಸ್ ಸಿಂಗಲ್ಸ್, ಡಬಲ್ಸ್, ಬ್ಯಾಡ್ಮಿಂಟನ್ ಸಿಂಗಲ್ಸ್, ಡಬಲ್ಸ್, ಮಿಸ್ ಉಡಾನ್, ಸೊಲೊ ನೃತ್ಯ ಸ್ಪರ್ಧೆಗಳಲ್ಲಿ ಎಸ್.ಬಿ. ಪಾಟೀಲ ದಂತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿದರು.

ಮಹಿಳೆಯರ ವಿಭಾಗದ ಸಮೂಹ ನೃತ್ಯ ಹಾಗೂ ಪುರುಷರ ವಿಭಾಗದ ಟೆಬಲ್ ಟೆನಿಸ್ ಡಬಲ್ಸ್ ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ ಬಾಚಿಕೊಂಡರು.

ಸಿದ್ಧರಾಮೇಶ್ವರ ಆಯುರ್ವೇದ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಪುರುಷರ ವಿಭಾಗದ ಟೇಬಲ್ ಟೆನಿಸ್ ಸಿಂಗಲ್ಸ್ (ಪ್ರಥಮ), ಡಬಲ್ಸ್ (ದ್ವಿತೀಯ), ಉಡಾನ್ ಪ್ರತಿಭೆ (ದ್ವಿತೀಯ), ಸ್ಕಿಟ್(ದ್ವಿತೀಯ), ಭಾಷಣ (ದ್ವಿತೀಯ)ದಲ್ಲಿ ಬಹುಮಾನ ಗಳಿಸಿ ಅತಿಹೆಚ್ಚು ಬಹುಮಾನ ಪಡೆದ ಕಾಲೇಜುಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದರು.

ಎನ್.ಕೆ. ಜಾಬಶೆಟ್ಟಿ ಆಯುರ್ವೇದ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಪುರುಷರ ವಿಭಾಗದ ಬ್ಯಾಡ್ಮಿಂಟನ್ ಡಬಲ್ಸ್ (ಪ್ರಥಮ), ಉಡಾನ್ ಪ್ರತಿಭೆ(ಪ್ರಥಮ), ಸಮೂಹ ನೃತ್ಯ (ಪ್ರಥಮ), ಮಿಸ್ ಉಡಾನ್ (ದ್ವಿತೀಯ) ನಲ್ಲಿ ಪ್ರಶಸ್ತಿ ಹೆದ್ದುಕೊಂಡರು.

ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿದ್ಯಾರ್ಥಿಗಳು ಭಾಷಣ (ಪ್ರಥಮ), ಮಹಿಳೆಯರ ವಿಭಾಗದ ಬ್ಯಾಡ್ಮಿಂಟನ್ ಡಬಲ್ಸ್ (ದ್ವಿತೀಯ), ಪುರುಷರ ವಿಭಾಗದ ಬ್ಯಾಂಡ್ಮಿಂಟನ್ ಸಿಂಗಲ್ಸ್ (ದ್ವಿತೀಯ) ನಲ್ಲಿ ಬಹುಮಾನ ಗಿಟ್ಟಿಸಿದರು.

ಬೀದರ್ ನಗರದ ಜಿಲ್ಲಾ ರಂಗ ಮಂದಿರದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಟ್ರೋಫಿ ಹಾಗೂ ಪ್ರಶಸ್ತಿಪತ್ರ ವಿತರಿಸಿ ಮಾತನಾಡಿದ ಸಂಸದ ಭಗವಂತ ಖೂಬಾ, ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯು ಉಡಾನ್ ಪ್ರತಿ ವರ್ಷ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಕ್ರೀಡಾಪುಟಗಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಒದಗಿಸುತ್ತಿರುವುದು ಶ್ಲಾಘನೀಯ’ ಎಂದರು.

ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಅಧ್ಯಕ್ಷ ಸಂಜಯ ಹತ್ತಿ ಮಾತನಾಡಿ, ‘ಐದು ವರ್ಷಗಳಿಂದ ಉಡಾನ್ ಹೆಸರಲ್ಲಿ ಅಂತರ ಕಾಲೇಜುಮಟ್ಟದ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿಯೂ ಕಾರ್ಯಕ್ರಮ ಯಶಸ್ವಿಯಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

‘ಬೀದರ್ ಹಾಗೂ ಕಲಬುರ್ಗಿ ಜಿಲ್ಲೆಯ ವೈದ್ಯಕೀಯ, ಆಯುರ್ವೇದ ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ವಿವಿಧ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು ಕ್ರೀಡಾ ಮನೋಭಾವ ಮೆರೆದಿದ್ದಾರೆ’ ಎಂದು ಹೇಳಿದರು.

ಉಡಾನ್ ಅಧ್ಯಕ್ಷ ಚೇತನ ಮೇಗೂರ ಮಾತನಾಡಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ರೋಟರಿ ಕ್ಲಬ್ ಆಫ್ ಬೀದರ್ ಫೋರ್ಟ್ ಅಧ್ಯಕ್ಷ ಜಹೀರ್ ಅನ್ವರ್, ಪ್ರಾಯೋಜಕ ವಿಜಯಲಕ್ಷ್ಮಿ ಸಿಲ್ಕ್‌ನ ಮುಖ್ಯಸ್ಥೆ ವಿಜಯಲಕ್ಷ್ಮಿ ಚೊಂಡೆ, ವೀರಭದ್ರೇಶ್ವರ ಮೋಟಾರ್ಸ್‌ನ ವೀರೇಶ ಖೇಳಗಿ ಉಪಸ್ಥಿತರಿದ್ದರು. ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಕಾರ್ಯದರ್ಶಿ ನಿತಿನ್ ಕರ್ಪೂರ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT