ಮಂಗಳವಾರ, ನವೆಂಬರ್ 19, 2019
29 °C

ನ.17ರಿಂದ ಅನುಭವ ಮಂಟಪ ಪಾದಯಾತ್ರೆ

Published:
Updated:
Prajavani

ಔರಾದ್: ‘ನ. 23 ಮತ್ತು 24ರಂದು ಬಸವಕಲ್ಯಾಣದಲ್ಲಿ ನಡೆಯುವ ಅನುಭವ ಮಂಟಪ ಉತ್ಸವದ ಅಂಗವಾಗಿ ಬಸವ ಭಕ್ತರಿಂದ ಪಾದಯಾತ್ರೆ ನಡೆಯಲಿದೆ’ ಎಂದು ಭಾಲ್ಕಿ ಮಠದ ಗುರುಬಸವ ಪಟ್ಟದ್ದೇವರು ಹೇಳಿದರು.

ಪಟ್ಟಣದಲ್ಲಿ ಗುರುವಾರ ನಡೆದ ಭಕ್ತರ ಸಭೆಯಲ್ಲಿ ಅವರು ಈ ವಿಷಯ ಪ್ರಕಟಿಸಿದರು.

ಭಕ್ತರ ಆಶಯ ಹಾಗೂ ಬಸವಲಿಂಗ ಪಟ್ಟದ್ದೇವರ ಮಾರ್ಗದರ್ಶದನ ಮೇರೆಗೆ ನ.17ರಂದು ಬೆಳಿಗ್ಗೆ 11 ಗಂಟೆಗೆ ಔರಾದ್ ಅಮರೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಪ್ರಾರಂಭವಾಗಲಿದೆ ಎಂದು ತಿಳಿಸಿದರು.

  ನ.18ರಂದು ಸಂತಪುರ, ಠಾಣಾಕುಶನೂರ, ಸಂಗಮ, 19ರಂದು ಡೊಣಗಾಪುರ, ಭಾಲ್ಕಿ, ದಾಡಗಿ ಮೂಲಕ ಪಾದಯಾತ್ರೆ ಹೊರಡಲಿದೆ. ನ. 20ರಂದು ಉಚ್ಚಾ, ಮೊರಂಬಿ, 21ರಂದು ಗೋರ್ಟಾ, ಮುಚಳಂಬ, ಧನ್ನೂರ ಮೂಲಕ 22ರಂದು ರಾತ್ರಿ ಬಸವಕಲ್ಯಾಣ ಅನುಭವ ಮಂಟಪಕ್ಕೆ ತಲುಪಲಿದೆ. ಬಸವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಪ್ರತಿಕ್ರಿಯಿಸಿ (+)