ಶನಿವಾರ, ನವೆಂಬರ್ 23, 2019
18 °C
ಟಿಪ್ಪು ಜಯಂತಿ, ಈದ ಮಿಲಾದ್ ಶಾಂತಿ ಸಭೆ

‘ಸೌಹಾರ್ದ, ಶಾಂತಿಯುತ ಹಬ್ಬ ಆಚರಿಸಿ’

Published:
Updated:
Prajavani

ಹುಮನಾಬಾದ್: ಅಯೋಧ್ಯೆ ತೀರ್ಪು, ಈದ್ ಮಿಲಾದ್ ಮತ್ತು ಟಿಪ್ಪು ಜಯಂತಿ ಪ್ರಯುಕ್ತ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಶಾಂತಿ ಸಭೆ ನಡೆಯಿತು.

ಪಿಎಸ್‌ಐ ರವಿಕುಮಾರ ಮಾತನಾಡಿ, ‘ಅಯೋಧ್ಯೆ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಯಾರ ಪರವಾಗಿ ತೀರ್ಪು ಬಂದರೂ ಎಲ್ಲರೂ ಸಮಾನವಾಗಿ ಸ್ವೀಕರಿಸಬೇಕು. ಸೌಹಾರ್ದದಿಂದ ಕೂಡಿ ಬಾಳಬೇಕು’ ಎಂದರು.

‘ಅಯೋದ್ಯೆ ವಿಚಾರವಾಗಿ ತೀರ್ಪು ಬಂದ ತಕ್ಷಣ ಯಾವುದೇ ಅಹಿತಕರ ಘಟನೆ ನಡೆಯದಂತೆ ಪ್ರತಿಯೂಬ್ಬರೂ ಎಚ್ಚರ ವಹಿಸಬೇಕು. ಪಟಾಕಿ ಸಿಡಿಸಬಾರದು. ಪರ–ವಿರೋಧ ಘೋಷಣೆಗಳನ್ನು ಹಾಕಬಾರದು’ ಎಂದರು.

ಪ್ರೋಬೆಷನರಿ ಪಿಎಸ್‌ಐ ಮಹೇಂದ್ರಕುಮಾರ, ಪುರಸಭೆ ಹಿರಿಯ ಸದಸ್ಯ ಅಫ್ಸರಮಿಯ್ಯ ಪುರಸಭೆ ಮಾಜಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಿಗಿ, ಸುಭಾಷ ಆರ್ಯ, ಜಮೀಲ ಖಾನ್, ಗೌತಮ ಸೆಡೋಳ ಮಾತನಾಡಿದರು.

ಪ್ರಮುಖರಾದ್ ಉಮೇಶ ಜಮಗಿ, ಮನೋಜ ಸಿತಾಳೆ, ಸೋಮನಾಥ ಪರಿಟ್, ದತ್ತು ಪರಿಟ್, ಗುಂಡು ರಡ್ಡಿ ವಾಂಜರಿ, ರಂಜೀತ ಮಾನಕರೆ,ಆನಂದ ತೇಲಂಗ್,ಎಮ್‌ಎ ಸಮದ್, ಮಹಾದೇವ ಗವಾರೆ ಮತ್ತು ಫಯಾಜ್ ಗತ್ತೇದಾರ ಇದ್ದರು.

ಪ್ರತಿಕ್ರಿಯಿಸಿ (+)