ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೆಮ್ಮದಿ ಬದುಕಿಗೆ ಸತ್ಸಂಗ ಅಗತ್ಯ’

Last Updated 9 ನವೆಂಬರ್ 2019, 10:09 IST
ಅಕ್ಷರ ಗಾತ್ರ

ಕಮಲನಗರ: ನೆಮ್ಮದಿಯ ಬದುಕಿಗೆ ಸಂತರ, ಶರಣರ, ಸಜ್ಜನರ ಸಂಗದಲ್ಲಿ ಸ್ವಲ್ಪ ಸಮಯ ಕಳೆಯಬೇಕು ಎಂದು ವಿಜಯಪುರದ ಅನುಭವ ಮಂಟಪದ ನಿರಂಜನ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಠಾಣಾಕುಶನೂರು ಗ್ರಾಮದಲ್ಲಿನ ಮಹಾದೇವ ಮಂದಿರದಲ್ಲಿ ಕಾರ್ತಿಕ ಮಾಸದ ನಿಮಿತ್ತ ಏರ್ಪಡಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಯಾವುದೇ ಮಾಸವಿರಲಿ ಧ್ಯಾನ ಮತ್ತು ಯೋಗ ಮಾಡುವುದರಿಂದ ಮನಸ್ಸು ಅರಳುತ್ತದೆ. ಶರಣರ ಜ್ಞಾನ ಸಂಪಾದನೆ, ಸಾಮಾಜಿಕ ಕಳಕಳಿ ಮತ್ತು ಕ್ರಿಯಾಶೀಲತೆ ಮಾದರಿ ಎಂದರು.

ಠಾಣಾಕುಶನುರು ವಿರಕ್ತ ಮಠದ ಪೀಠಾಧ್ಯಕ್ಷ ಸಿದ್ದಲಿಂಗೇಶ್ವರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.

ಕನ್ನಡ ಸಾಹಿತ್ಯ ಪರಿಷತ್ ವಲಯ ಘಟಕದ ಅಧ್ಯಕ್ಷ ಸತೀಷ ಜಿರ್ಗೆ, ಸಂಘ ಮುಖ್ಯಕಾರ್ಯದರ್ಶಿ ಜಗನ್ನಾಥ ಜಿರ್ಗೆ, ಮುಖಂಡ ರಾಮಶೇಟ್ಟಿ ಪನ್ನಾಳೆ, ಶಿವಶರಣಪ್ಪ ವಲ್ಲೇಪುರೆ, ಚನ್ನಮಲ್ಲಪ್ಪ ಚಿಂಚೊಳೆ, ಬಾಲಾಜಿ ವಾಘಮಾರೆ, ಮರುತಿ ಕೋಳಿ, ರಾಜಕುಮಾರ ಬೆಣ್ಣೆ, ರೇವಣಪ್ಪ ಬೆಣ್ಣೆ ರಮೇಶ ಬೋಚರೆ, ಚಂದ್ರಕಾತ ಜಿರ್ಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT