ಬಸವಕಲ್ಯಾಣ: ‘ಉತ್ತಮ ಆರೋಗ್ಯಕ್ಕಾಗಿ ಜನಸಾಮಾನ್ಯರಿಗೆ ಮಾರ್ಗದರ್ಶನ ನೀಡುವ ಅಗತ್ಯವಿದೆ. ಸುಶೀಲಾ ಶಂಕರ ಸಾಗಿಬಂದ ದಾರಿ ಗ್ರಂಥದಲ್ಲಿ ಈ ನಿಟ್ಟಿನಲ್ಲಿ ಕೆಲ ಉತ್ತಮ ಸಲಹೆ ನೀಡಲಾಗಿದೆ’ ಎಂದು ವಿಶ್ವ ಬಸವಧರ್ಮ ವಿಶ್ವಸ್ಥ ಮಂಡಳಿ, ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಅಭಿಪ್ರಾಯಪಟ್ಟರು.

ನಗರದ ಬಂದವರ ಓಣಿ ಕಲ್ಯಾಣ ಮಂಟಪದಲ್ಲಿ ನಿವೃತ್ತ ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ಸುಶೀಲಾ ಹೊಳಕುಂದೆ ಬರೆದ ‘ಸುಶೀಲಾ ಶಂಕರ ಸಾಗಿಬಂದ ದಾರಿ’ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಡಾ.ಸುಶೀಲಾ ವೈದ್ಯರಾಗಿ ಜನರ ಆರೋಗ್ಯ ಕಾಪಾಡುವುದಷ್ಟೇ ಅಲ್ಲ, 75 ವರ್ಷವಾದರೂ ತಾವೂ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿದ್ದು ಅನ್ಯರು ಪ್ರೇರಣೆ ಪಡೆಯುವಂತೆ ಬದುಕುತ್ತಿದ್ದಾರೆ’ ಎಂದರು.

ಹಾರಕೂಡ ಚನ್ನವೀರ ಶಿವಾಚಾರ್ಯರು ಮಾತನಾಡಿ, ‘ನಿಸ್ವಾರ್ಥ ಮತ್ತು ಪ್ರಾಮಾಣಿಕ ಸೇವೆಯಿಂದ ಜನಮಾನಸದಲ್ಲಿ ಎತ್ತರದ ಸ್ಥಾನಕ್ಕೇರಬಹುದು. ಸತ್ಕಾರ್ಯವೇ ಸದಾಶಿವನ ನಿಜವಾದ ಪೂಜೆ ಎಂದು ತಿಳಿದರೆ ಜೀವನ ಪಾವನ ಆಗುತ್ತದೆ. ಡಾ.ಸುಶೀಲಾ ಅವರ ಸೇವೆ ಜನರು ಎಂದಿಗೂ ನೆನಪಿಡುವಂತಿದೆ’ ಎಂದರು.

ಡಾ.ಸುಶೀಲಾ ಹೊಳಕುಂದೆ ಮಾತನಾಡಿದರು. ವಿಧಾನಪರಿಷತ್ ಸದಸ್ಯ ಎಂ.ಜಿ.ಮುಳೆ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಸಾವಿತ್ರಿ ಶರಣು ಸಲಗರ, ನವಲಿಂಗಕಮಾರ ಪಾಟೀಲ ಮಾತನಾಡಿದರು.

ಬಸವೇಶ್ವರ ದೇವಸ್ಥಾನ ಸಮಿತಿ ನಿರ್ದೇಶಕ ಸುಭಾಷ ಹೊಳಕುಂದೆ, ಬೀದರ್ ಬ್ರಿಮ್ಸ್ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ವಿಜಯಕುಮಾರ ಅಂತಪ್ಪ, ವೈದ್ಯೆ ಡಾ.ದೀಪಾ ಹೊಳಕುಂದೆ, ಪುಣೆಯ ಎಂಜಿನಿಯರ್ ರಶ್ಮಿ ಶಿವಕುಮಾರ ಎಕ್ಕೆಳೆ, ಸಿಂಗಾಪುರದಲ್ಲಿ ಎಂಜಿನಿಯರ್ ಆಗಿರುವ ನಂದಿನಿ ಬಾಲಾಜಿ ಚಿಕ್ರಾಳೆ, ಕಲಬುರಗಿಯ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕಿ ಡಾ.ರೂಪಾ ಶಶಿಧರ ಬನ್ನಾಳೆ, ಸುಭಾಶ್ಚಂದ್ರ ನಾಗರಾಳೆ, ಮಲ್ಲಿನಾಥ ಹಿರೇಮಠ ಉಪಸ್ಥಿತರಿದ್ದರು. ಡಾ.ಸುಶೀಲಾ ಅವರನ್ನು ಅನೇಕರು ಸನ್ಮಾನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.