ಗುರುವಾರ , ಜನವರಿ 27, 2022
21 °C

ಯುವ ಬರಹಗಾರರಿಗೆ ಚಂಪಾ ಸ್ಫೂರ್ತಿ: ವೀರಂತ ರೆಡ್ಡಿ ಜಂಪಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಮನಾಬಾದ್: ತಮ್ಮ ಮೊನಚಾದ ಲೇಖನ, ಭಾಷಣಗಳಲ್ಲದೆ ಸಾಮಾಜಿಕ ಚಳವಳಿಗಳಲ್ಲಿಯು ಪ್ರೊ. ಚಂಪಾ ಅವರು ಸದಾ ಮುಂಚೂಣಿಯಲ್ಲಿ ಇರುತ್ತಿ ದ್ದರು ಎಂದು ಕಸಾಪ ಮಾಜಿ ಅಧ್ಯಕ್ಷ ವೀರಂತರೆಡ್ಡಿ ಜಂಪಾ ಹೇಳಿದರು.

ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು ಬಾಲಕರ ಪ್ರೌಢ ವಿಭಾಗದಲ್ಲಿ ಧರಿನಾಡು ಕನ್ನಡ ಸಂಘದಿಂದ ನಡೆದ ಚಂಪಾ ಶ್ರದ್ಧಾಂಜಲಿ ಸಭೆಯಲ್ಲಿ
ಅವರು ಮಾತನಾಡಿದರು.

ಸಾಹಿತಿ ಕಾಶಿನಾಥ ರೆಡ್ಡಿ ಅವರು ಮಾತನಾಡಿ, ಚಂಪಾ ಅವರು ಕನ್ನಡ ಕಟ್ಟುವ ಕೆಲಸದಲ್ಲಿ ನಿರಂತವಾಗಿ, ಇತರ ಅನೇಕ ಯುವ ಬರಹಗಾರರಿಗೆ ಸ್ಪೂರ್ತಿಯಾಗಿ ಅವರ ಬೆಳವಣಿಗೆಗೆ ಪ್ರೋತ್ಸಾಹಿಸುತ್ತಿದ್ದರು ಎಂದರು.

ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ ಹಾಗೂ ರಾಜ್ಯ ಗೋಂಧಳಿ ಸಮಾಜ ಸಂಘಟನೆಯ ಅಧ್ಯಕ್ಷ ಸಿದ್ರಾಮ ವಾಘ ಮಾರೆ ಮಾತನಾಡಿದರು.

ಸಂಘದ ಅಧ್ಯಕ್ಷ ಸಿದ್ಧಾರ್ಥ ಮಿತ್ರಾ, ಡಾ.ಕೆ.ಚಂದ್ರಕಾಂತ, ಸಂಗಮ್ಮ ಸಜ್ಜನ, ಶೇಖ ಮಹಿಬೂಬ ಪಟೇಲ್, ರವಿ ಮಲಶೆಟ್ಟಿ, ತ್ರಿವೇಣಿ ಗಂಟಕರ, ಬಷಿರುದ್ದಿನ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು