ಬೀದರ್: ಛತ್ರಪತಿ ಶಿವಾಜಿ ಮಹಾರಾಜರ ಕುರಿತು ನಗರದ ಕರ್ನಾಟಕ ಕಾಲೇಜಿನಲ್ಲಿ ಏರ್ಪಡಿಸಿದ್ದ ವಿಚಾರ ಸಂಕಿರಣದ ಅಂಗವಾಗಿ ನಡೆದ ಕವಿಗೋಷ್ಠಿಯು ಶಿವಾಜಿಯವರ ಜೀವನದ ಮೇಲೆ ಬೆಳಕು ಚೆಲ್ಲಿತು.

ಜೀಜಾಬಾಯಿ ಪ್ರಭಾವ, ಗೆರಿಲ್ಲಾ ಯುದ್ಧ, ಸೌಹಾರ್ದ, ಸ್ತ್ರೀಯರ ಗೌರವ, ಪರಧರ್ಮ ಸಹಿಷ್ಣು ಎಂಬುದನ್ನು ಕವಿತೆಗಳು ಸಾರಿದವು.

ಸಾಹಿತಿ ಸುನಿತಾ ಕೂಡ್ಲಿಕರ್ ಮಾತನಾಡಿ, ಕವಿತೆಗಳಲ್ಲಿ ಶಿವಾಜಿಯ ಖಡ್ಗದರ್ಶನ, ಹಿಂದವಿ ಸಾಮ್ರಾಜ್ಯ ಸ್ಥಾಪನೆಯ ಜನಕ, ಶಿವನೇರಿಕೋಟೆಯ ಶೂರ, ಸೇನಾನಾಯಕನ ಧೈರ್ಯ ಮುಂತಾದವುಗಳ ಮೇಲೆ ಬೆಳಕು ಚೆಲ್ಲುವಲ್ಲಿ ಯಶಸ್ವಿಯಾಗಿವೆ. ಕವಿತೆಗಳು ಸಾಧಕರ ಜೀವನದ ಆದರ್ಶಗಳನ್ನು ಮುಂದಿನ ಯುವ ಪೀಳಿಗೆಗೆ ತಿಳಿಸಿಕೊಡುತ್ತವೆ ಎಂದರು.

ಕವಿಗೋಷ್ಠಿಯ ಅಧ್ಯಕ್ಷತೆ ಹಿರಿಯ ಸಾಹಿತಿ ಎಂ.ಜಿ. ದೇಶಪಾಂಡೆ ವಹಿಸಿದ್ದರು. ಬಸವರಾಜ ಬಿರಾದಾರ, ರವೀಂದ್ರ ಲಂಜವಾಡಕರ, ದಿಲೀಪ್ ಮಾಲೆ, ಮಲ್ಲಮ್ಮ ಸಂತಾಜಿ, ಶ್ರೇಯಾ ಮಹೀಂದ್ರಕರ್, ಗೀತಾ ಪೋಸ್ತೆ, ಲಕ್ಷ್ಮೀ ಕುಂಬಾರ್ ಕವನ ವಾಚಿಸಿದರು. ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಜಗನ್ನಾಥ ಹೆಬ್ಬಾಳೆ ಹಾಜರಿದ್ದರು.

ಕರ್ನಾಟಕ ಮರಾಠ ಸಮುದಾಯ ಅಭಿವೃದ್ಧಿ ನಿಗಮ ಬೆಂಗಳೂರು, ಕರ್ನಾಟಕ ಸಾಹಿತ್ಯ ಸಂಘ, ಕರ್ನಾಟಕ ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆಗಳ ವಿಶ್ವವಿದ್ಯಾಲಯ ಬೀದರ್ ಹಾಗೂ ಕರ್ನಾಟಕ ಕಾಲೇಜಿನ ಇತಿಹಾಸ ವಿಭಾಗದ ಸಂಯುಕ್ತಾಶ್ರಯದಲ್ಲಿ ವಿಚಾರ ಸಂಕಿರಣ ಹಾಗೂ ಕವಿಗೋಷ್ಠಿ ಏರ್ಪಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.