ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಟಗುಪ್ಪ: ಕಲುಷಿತ ನೀರು ಪೂರೈಕೆ

Last Updated 30 ಮೇ 2022, 12:43 IST
ಅಕ್ಷರ ಗಾತ್ರ

ಚಿಟಗುಪ್ಪ: ಪಟ್ಟಣದ ವಾರ್ಡ್‌ ಸಂಖ್ಯೆ 4ರಲ್ಲಿ ಪ್ರತಿವರ್ಷ ಮಳೆಗಾಲ ಆರಂಭವಾಗುತ್ತಿದ್ದಂತೆ ಪುರಸಭೆಯ ನಲ್ಲಿ ನೀರು ಕಲುಷಿತವಾಗುತ್ತದೆ. ನಾಗರಿಕರು ರೋಗಭೀತಿ ಎದುರಿಸುತ್ತಾರೆ.

‘ಎಲ್ಲಿ ಮಳೆ ನೀರು ಪೈಪ್‌ ಸೇರುತ್ತಿದೆ ಎನ್ನುವ ಕುರಿತು ಪುರಸಭೆ ಗಮನಹರಿಸುತ್ತಿಲ್ಲ. ಆದ್ದರಿಂದ ಪ್ರತಿವರ್ಷ ಈ ಸಮಸ್ಯೆ ಎದುರಾಗುತ್ತದೆ’ ಎಂದು ವಾರ್ಡ್‌ನ ನಿವಾಸಿ ರೇವಣಪ್ಪ ಹೂಗಾರ ತಿಳಿಸಿದ್ದಾರೆ.

‘ಬಹುತೇಕ ಸ್ಥಳಗಳಲ್ಲಿ ನಲ್ಲಿ ನೀರು ಸೋರಿಕೆಯಾಗುತ್ತಿದೆ. ಆದರೂ ಸರಿಪಡಿಸುವ ಕೆಲಸ ಆಗಿಲ್ಲ. ಹೊಂಡ ನಿರ್ಮಾಣವಾಗುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಕಸ ಕಡ್ಡಿ ಹಾಗೂ ಪ್ಲಾಸ್ಟಿಕ್‌ಗಳೂ ನೀರಿನಲ್ಲಿ ತೇಲುತ್ತಿವೆ. ಪುರಸಭೆ ಆಡಳಿತ ಹಾಗೂ ಸ್ಥಳೀಯ ಸದಸ್ಯರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ಹೇಳುತ್ತಾರೆ.

‘ನಲ್ಲಿ ನೀರಿಗೆ ಮಳೆ ನೀರು ಸೇರುತ್ತಿದೆ ಎನ್ನುವ ಕುರಿತು ದೂರು ಬಂದಿಲ್ಲ. ಆದಾಗ್ಯೂ ತಕ್ಷಣ ವಾರ್ಡ್‌ 4ರಲ್ಲಿಯ ಸಮಸ್ಯೆ ಪರಿಹರಿಸಿ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತದೆ’ ಎಂದು ಮುಖ್ಯಾಧಿಕಾರಿ ಹುಸಾಮೋದ್ದೀನ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT