ಭಾಲ್ಕಿ: ‘ಪ್ರತಿಯೊಬ್ಬರೂ ಪ್ರತಿದಿನ ಇಷ್ಟಲಿಂಗ ಪೂಜೆ ಮಾಡುವ ಮೂಲಕ ಭಗವಂತನನ್ನು ಒಲಿಸಿಕೊಳ್ಳಬಹುದು’ ಎಂದು ತಡೋಳಾ, ಮೆಹಕರ ಕಟ್ಟಿಮನಿ ಸಂಸ್ಥಾನದ ಪೀಠಾಧಿಪತಿ ರಾಜೇಶ್ವರ ಶಿವಾಚಾರ್ಯರು ಹೇಳಿದರು.

ಇಲ್ಲಿಯ ಭಾಲ್ಕೇಶ್ವರ ದೇವಾಲಯದಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ನಡೆದ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಉತ್ತಮ ಸಂಸ್ಕಾರ, ಸಂಗತಿ ಎಂಥವರನ್ನೂ ಸದ್ಗುಣಿಗಳನ್ನಾಗಿಸುತ್ತವೆ. ಹಾಗಾಗಿ, ಬದುಕಿನಲ್ಲಿ ಎಲ್ಲರೂ ಒಳ್ಳೆಯವರ ಸಂಗದಲ್ಲಿ ಇರಬೇಕು. ಏಕಾಗ್ರತೆ, ಮಾನಸಿಕ ನೆಮ್ಮದಿ, ಸಂತೃಪ್ತಿ ಪಡೆಯಲು ಪ್ರತಿದಿನ ದೇವರ ಧ್ಯಾನ, ಲಿಂಗಪೂಜೆ, ಭಜನೆ, ಕೀರ್ತನೆಯಲ್ಲಿ ತೊಡಗಬೇಕು ಎಂದು ತಿಳಿ ಹೇಳಿದರು.

ಮಾಜಿ ಶಾಸಕ ಪ್ರಕಾಶ ಖಂಡ್ರೆ, ಎನ್ಎಸ್ಎಸ್ಕೆ ಅಧ್ಯಕ್ಷ ಡಿ.ಕೆ.ಸಿದ್ರಾಮ, ಪ್ರಮುಖರಾದ ಶಿವಲಿಂಗ ಕುಂಬಾರ, ಅಶೋಕ ಲೋಖಂಡೆ, ಜೈಕಿಶನ್ ಬಿಯಾಣಿ, ಪ್ರಸನ್ನ ಖಂಡ್ರೆ, ಡಾ.ವಸಂತ ಪವಾರ್, ಸಾಗರ ಮಾಲಾನಿ, ಜೈಲೇಶ ಮಾಲಪಾಣಿ, ಪ್ರಿಯಾ ಎಂ.ದಶಮುಖೆ ಹಾಗೂ ಚಂದ್ರಕಾಂತ ತಳವಾಡೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.