ಶನಿವಾರ, ಸೆಪ್ಟೆಂಬರ್ 21, 2019
21 °C

ಪಿಒಪಿ ಗಣೇಶ ವಿಗ್ರಹ ವಶ: ಸಾರ್ವಜನಿಕರ ಆಕ್ರೋಶ

Published:
Updated:
Prajavani

ಬೀದರ್: ಪಿಒಪಿ ಗಣೇಶನ ವಿಗ್ರಹಗಳನ್ನು ಮಾರಾಟ ಮಾಡಬಾರದು ಎಂಬ ಜಿಲ್ಲಾಧಿಕಾರಿ ಆದೇಶದಂತೆ ಭಾನುವಾರ ನಗರಸಭೆ ಸಿಬ್ಬಂದಿ ಹಾಗೂ ಪೊಲೀಸರು ಗಣೇಶನ ವಿಗ್ರಹಗಳನ್ನು ಪಡಿಸಿಕೊಳ್ಳಲು ಮುಂದಾದರು. ಆದರೆ ಸಾರ್ವಜನಿಕರ ಆಕ್ರೋಶ ಹೆಚ್ಚಾದ ಹಿನ್ನಲೆಯಲ್ಲಿ ಕೈಬಿಡಲಾಯಿತು.

ನಗರದ ಮುಖ್ಯ ರಸ್ತೆಯಲ್ಲಿ ಮಾರಾಟ ಮಾಡುತ್ತಿರುವ ಪಿಒಪಿ ಗಣೇಶ ವಿಗ್ರಹಗಳನ್ನು ಪಡಿಸಿಕೊಂಡಿದ್ದಾರೆ. ನಂತರ ಮೋಹನ ಮಾರ್ಕೆಟ್‌ನಲ್ಲಿ ಮಾರಾಟ ಮಾಡುತ್ತಿರುವ ವಿಗ್ರಹಗಳನ್ನು ವಶಪಡಿಸಿಕೊಳ್ಳಲು ಮುಂದಾದಾಗ ಅಲ್ಲಿನ ವ್ಯಾಪಾರಿಗಳು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲಾಡಳಿತ ಗಣೇಶನ ಮೂರ್ತಿಗಳನ್ನು ತಯಾರಿಸುವ ಮುನ್ನವೇ ಆದೇಶ ಹೊರಡಿಸಬೇಕಿತ್ತು.ಆದರೆ ಇದೀಗ ಹಬ್ಬದ ದಿನದಂದು ಖರೀದಿಸಿದ ಮೂರ್ತಿಗಳು ವಶಪಡಿಸಿಕೊಳ್ಳುವುದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರಲ್ಲದೇ ಪ್ರತಿಭಟನೆಗೆ ಮುಂದಾದರು.

ಈ ವರ್ಷ ಆದೇಶ ಸಡಿಲಿಕೆ: ನಗರಸಭೆ ಆಯುಕ್ತ ಬಿ.ಬಸಪ್ಪ, ಗಣೇಶ ಮೂರ್ತಿಯ ವ್ಯಾಪಾರಸ್ಥರು ಈ ವರ್ಷ ಕಾಲಾವಕಾಶ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.ಆ ದಿಸೆಯಲ್ಲಿ ವಶಪಡಿಸಿಕೊಂಡ ಗಣೇಶನ ಮೂರ್ತಿಗಳು ವ್ಯಾಪಾರಸ್ಥರಿಗೆ ಮರಳಿ ಕೊಡಲಾಗಿದೆ. ಅದರಂತೆ ವ್ಯಾಪಾರಸ್ಥರು ಮುಂದಿನ ವರ್ಷ ಪಿಒಪಿ ಗಣೇಶನ ವಿಗ್ರಹ ಮಾರಾಟ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

Post Comments (+)